alex Certify BIG NEWS: ಜೆಡಿಎಸ್ ಶಾಸಕ – ಬಿಜೆಪಿ ಸಂಸದರ ನಡುವೆ ಜಟಾಪಟಿ; ಏಕವಚನದಲ್ಲಿ ಬಾಯಿಗೆ ಬಂದಂತೆ ಬೈದಾಡಿಕೊಂಡ ಜನಪ್ರತಿನಿಧಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜೆಡಿಎಸ್ ಶಾಸಕ – ಬಿಜೆಪಿ ಸಂಸದರ ನಡುವೆ ಜಟಾಪಟಿ; ಏಕವಚನದಲ್ಲಿ ಬಾಯಿಗೆ ಬಂದಂತೆ ಬೈದಾಡಿಕೊಂಡ ಜನಪ್ರತಿನಿಧಿಗಳು

ತುಮಕೂರು: ಗುಬ್ಬಿ ತಾಲೂಕಿನ ಸಿ. ನಂದಿಹಳ್ಳಿಯಲ್ಲಿ ಬೆಸ್ಕಾಂ ವಿದ್ಯುತ್ ಎಂಎಸ್ ಎಸ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ನಡುವೆ ಜಟಾಪಟಿ ನಡೆದಿದ್ದು, ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.

ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರದಿಂದ 550 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎಂದು ಸಂಸದ ಬಸವರಾಜು ಹೇಳುತ್ತಿದ್ದಂತೆ ಸಿಡಿದೆದ್ದ ಶಾಸಕ ಶ್ರೀನಿವಾಸ್, ರೈತರಿಗೆ ಸುಳ್ಳು ಯಾಕೆ ಹೇಳ್ತೀರಾ? ವಯಸ್ಸಾಗಿದೆ ಈಗಲಾದರೂ ಸುಳ್ಳು ಹೇಳೋದನ್ನು ನಿಲ್ಲಿಸಿ ಎಂದು ಗುಡುಗಿದ್ದಾರೆ.

12 ಸಾವಿರ ರೂ. ರಿಯಾಯಿತಿಯಲ್ಲಿ ಪಡೆಯಿರಿ ನಿಮ್ಮಿಷ್ಟದ ಆಪಲ್​ ಫೋನ್

ಶಾಸಕರ ಮಾತಿಗೆ ಕೋಪಗೊಂಡ ಸಂಸದ ನಾನು ಜೀವನದಲ್ಲಿ ಸುಳ್ಳು ಹೇಳಿಲ್ಲ. ಇವರ ಮಾತು ನಂಬಬೇಡಿ ನಾನು ಹಲವು ಯೋಜನೆಗಳನ್ನು ತಂದಿದ್ದೇನೆ. 550 ಕೋಟಿ ಅನುದಾನ ತಂದಿದ್ದೇನೆ ಎಂದು ಹೇಳಿದರು.

ಇದರಿಂದ ಕೆಂಡಾಮಂಡಲರಾದ ಶಾಸಕ ಶ್ರೀನಿವಾಸ್, ನಿನ್ನ ಯೋಗ್ಯತೆಗೆ ಇಷ್ಟು ಬೆಂಕಿ ಹಾಕಾ… ಬರಿ ಸುಳ್ಳು ಹೇಳಿಕೊಂಡೇ ಕಾಲ ಕಳೆಯುತ್ತಿದ್ದೀರಾ. ವಯಸ್ಸಾಗಿದೆ ಈಗಲಾದರೂ ಮಾನ ಮರ್ಯಾದೆಯಿಂದ ಇರಬಾರದೇ ? 550 ಕೋಟಿ ಯಾರು ನಿಮ್ಮ ತಾತ ತಂದಿದ್ನಾ ? 550 ಕೋಟಿ ಎಲ್ಲಿ ತಂದಿದ್ದೀರಿ ತೋರಿಸಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇಬ್ಬರು ಜನಪ್ರತಿನಿಧಿಗಳು ಪರಸ್ಪರ ಕೈ ಕೈ ಮಿಲಾಸಿಕೊಳ್ಳುವ ಹಂತಕ್ಕೂ ತಲುಪಿದ್ದು, ತಕ್ಷಣ ಎಚ್ಚೆತ್ತ ಅಧಿಕಾರಿಗಳು ಇಬ್ಬರು ನಾಯಕರನ್ನು ಸಮಾಧಾನ ಪಡಿಸಿದ ಘಟನೆ ನಡೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...