ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಸೋಲಿನ ಹೊಣೆಹೊತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎನ್.ಹೆಚ್. ಕೋನರೆಡ್ಡಿ ರಾಜೀನಾಮೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 25ನೇ ವಾರ್ಡ್ ನ ಜೆಡಿಎಸ್ ಅಭರ್ಥಿ ಲಕ್ಷ್ಮಿ ಮಾರುತಿ ಹಿಂಡಸಗೇರಿ ಓರ್ವರು ಮಾತ್ರ ಗೆಲುವು ಸಾಧಿಸಿದ್ದರು. ಜೆಡಿಎಸ್ ನ ಹಿರಿಯ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದಾಗ್ಯೂ ನಿರೀಕ್ಷೆಗೆ ತಕ್ಕಂತೆ ಜೆಡಿಎಸ್ ಗೆಲುವು ಸಾಧಿಸಿಲ್ಲ ಈ ಹಿನ್ನೆಲೆಯಲ್ಲಿ ಸೋಲಿನ ನೈತಿಕ ಹೊಣೆಹೊತ್ತು ಕೋನರೆಡ್ಡಿ ರಾಜೀನಾಮೆ ನೀಡಿದ್ದಾರೆ.
ಡೆಂಗ್ಯೂ ಹತ್ತಿಕ್ಕಲು ಗ್ಯಾಂಬುಸಿಯಾ ಮೀನುಗಳ ಮೊರೆ ಹೋದ ಫಿರೋಜಾಬಾದ್ ಆಡಳಿತ
ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷದ ಓರ್ವ ಅಭ್ಯರ್ಥಿ ಮಾತ್ರ ಗೆದ್ದಿದ್ದಾರೆ. ಅಭ್ಯರ್ಥಿಗಳ ಸೋಲು ನನ್ನ ಮನಸ್ಸಿಗೆ ನೋವು ತಂದಿದೆ. ಹಾಗಾಗಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾಗಿ ಕೋನರೆಡ್ಡಿ ತಿಳಿಸಿದ್ದಾರೆ.