alex Certify BIG NEWS: ಜೆಡಿಎಸ್ ಬಗ್ಗೆ ‘ಕೈ’ ನಾಯಕರಿಗೆ ನಡುಕ ಶುರುವಾಗಿದೆ; ಕಾಂಗ್ರೆಸ್ ಗೆ ಟಾಂಗ್ ನೀಡಿದ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜೆಡಿಎಸ್ ಬಗ್ಗೆ ‘ಕೈ’ ನಾಯಕರಿಗೆ ನಡುಕ ಶುರುವಾಗಿದೆ; ಕಾಂಗ್ರೆಸ್ ಗೆ ಟಾಂಗ್ ನೀಡಿದ HDK

ರಾಮನಗರ: ಜೆಡಿಎಸ್ ಬಿಟ್ಟು ಹೋದವರು, ಹೋಗುವವರು ಹಲವರು ಇದ್ದಾರೆ. ನಾಯಕರಿಂದ ಪಕ್ಷವಲ್ಲ, ಕಾರ್ಯಕರ್ತರಿಂದ ಪಕ್ಷ ಎನ್ನುವುದು ಗೊತ್ತಾಗುತ್ತದೆ. ನಮ್ಮ ಶಕ್ತಿ ಬಳಕೆ ಮಾಡಿಕೊಂಡು ಅಧಿಕಾರದ ರುಚಿ ಕಂಡು ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಟ್ಟು ಹೋದವರ ಬಗ್ಗೆ ನಾನೇನು ಮಾತನಾಡಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಜೆಡಿಎಸ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಎಲ್ಲಾ ಸಮುದಾಯದವರನ್ನೂ ಗೌರವಿಸುತ್ತೆ. ಅಲ್ಪಸಂಖ್ಯಾತ ಸಮುದಾಯಕ್ಕೂ ಹಲವು ಕೊಡುಗೆಗಳನ್ನು ನೀಡಿದ್ದೇವೆ. ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದುಕೊಂಡು ಹೋಗುವುದು ನಮ್ಮ ಪಕ್ಷದ ಉದ್ದೇಶ ಎಂದರು.

BIG NEWS: ಅದೊಂದು ಅನೈತಿಕ ಸರ್ಕಾರವಾಗಿತ್ತು; ಮೈತ್ರಿ ಸರ್ಕಾರದ ಬಗ್ಗೆ ಕಿಡಿಕಾರಿದ ಆರೋಗ್ಯ ಸಚಿವ; ಸಿದ್ದರಾಮಯ್ಯ ವಿರುದ್ಧವೂ ಆಕ್ರೋಶ

ಜೆಡಿಎಸ್ ನಿಂದಾಗಿ ಯಾವುದೇ ಶಾಸಕರಿಗೆ ಅಪಚಾರವಾಗಿಲ್ಲ, ಪಕ್ಷ ಬಿಡುವವರು ಆತ್ಮ ವಿಮರ್ಷೆ ಮಾಡಿಕೊಳ್ಳಲಿ. ನಮ್ಮ ಶಕ್ತಿ ಬಳಸಿಕೊಂಡು ನಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಬಾಗಿಲು ಸದಾ ತೆರೆದಿದೆ, ಹೋಗುವವರು ಹೋಗಲಿ, ಬರುವವರು ಬರಲಿ ಯಾರೊಬ್ಬರಿಂದಾಗಿ ಪಕ್ಷ ಇಲ್ಲ, ಕಾರ್ಯಕರ್ತರಿಂದಾಗಿ ಪಕ್ಷ, ಸಂಘಟನೆ ಎಂಬುದು ಗೊತ್ತಿರಲಿ ಎಂದು ಹೇಳಿದರು.

ಜೆಡಿಎಸ್ ಕಾರ್ಯಾಗಾರದಿಂದಾಗಿ ಈಗಾಗಲೇ ಕಾಂಗ್ರೆಸ್ ನಾಯಕರಿಗೆ ನಡುಕ ಶುರುವಾಗಿದೆ. ಜೆಡಿಎಸ್ ನಿಷ್ಕ್ರಿಯವಾಗಿದೆ ಎಂದು ಟೀಕಿಸುತ್ತಿದ್ದವರಿಗೆ ಈಗ ಆತಂಕ ಎದುರಾಗಿದೆ. ಹಾಗಾಗಿ ಕಾಂಗ್ರೆಸ್ ನಾಯಕರು ನಮ್ಮಂತೆಯೇ ಕಾರ್ಯಾಗಾರ ಆಯೋಜಿಸುತ್ತಿದ್ದಾರೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...