ಮಂಡ್ಯ: ಜೆಡಿಎಸ್ ಪರ ಪ್ರಚಾರ ಮಾಡಿದ್ದಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಜಗದೀಶ್ ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪಗಳ ನಡುವೆ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಪ್ರಕರಣ ನಡೆಸಿರುವಾಗಲೇ ಇದೀಗ ಮತ್ತೊಂದು ವರ್ಗಾವಣೆ ಪ್ರಕರಣ ಕೇಳಿಬಂದಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದಕ್ಕೆ ಲೈನ್ ಮ್ಯಾನ್ ಓರ್ವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಆಡಿಯೋ ವೈರಲ್ ಆಗಿದೆ. ನಾಗಮಂಗಲ ತಾಲೂಕಿನ ಕೃಷ್ಣೇಗೌಡ ಎಂಬುವವರು ಕೆಇಬಿ ಸಿಬ್ಬಂದಿಗೆ ಕರೆ ಮಾಡಿ ಪದೇ ಪದೇ ಕರೆಂಟ್ ತೆಗೆಯುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕೆಇಬಿ ಸಿಬ್ಬಂದಿ ಓರ್ವ ಲೈನ್ ಮ್ಯಾನ್ ರಜೆಯಲ್ಲಿದ್ದಾನೆ. ಇನ್ನೋರ್ವ ವರ್ಗಾವಣೆಯಾಗಿದ್ದಾನೆ. ಭೀಮನಹಳ್ಳಿಯ ಲೈನ್ ಮ್ಯಾನ್ ವರ್ಗಾವಣೆಯಾಗಿದ್ದು, ಜೆಡಿಎಸ್ ಪರ ಕೆಲಸ ಮಾಡಿದ್ದಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದಿದ್ದಾರೆ. ಇದೀಗ ಲೈನ್ ಮನ್ ವರ್ಗಾವಣೆ ವಿಚಾರ ಚರ್ಚೆಗೆ ಕಾರಣವಾಗಿದೆ.