ಬೆಂಗಳೂರು: ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.
ಭೋಜೇಗೌಡರು ಪ್ರದರ್ಶಿಸುತ್ತಿರುವ ಪತ್ರ ವೈದ್ಯರೊಬ್ಬರಿಗೆ ಬರೆದಿರುವುದು. ನಾನು ವೈದ್ಯನಲ್ಲ ಹಾಗಾಗಿ ಅದು ನನಗೆ ಬರೆದ ಪತ್ರವಲ್ಲ. ಅಲ್ಲದೇ ಅವರು ಆರೋಪಿಸಿದ ವ್ಯಕ್ತಿ ನನ್ನ ಕಚೇರಿಯಲ್ಲಿಯೂ ಇಲ್ಲ. ದಾಖಲೆ ಮೇಲೆ ವಿಶ್ವಾಸವಿದ್ದರೆ ಅವರು ಹೆಸರನ್ನು ಅಡಗಿಸುತ್ತಿರುವುದೇಕೆ ? ಎಂದು ಪ್ರಶ್ನಿಸಿದ್ದಾರೆ.
ಇದೊಂದು ಆಧಾರ ರಹಿತ ಆರೋಪ ಇದನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ನನ್ನ ವೈಯಕ್ತಿಕ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ.
ಈ ಮೂಲಕ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಡಾ. ಬಿ.ಡಿ. ಪಾಂಡೆ ಅವರಿಗೆ ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜೋಶಿ ಹಂಚಿಕೊಳ್ಳುವ ಮೂಲಕ ಭೋಜೇಗೌಡರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.