ಬೆಂಗಳೂರು: ಕಲಬುರ್ಗಿ ಪಾಲಿಕೆ ಚುನಾವಣೆ ಫಲಿತಾಂಶ ಅತಂತ್ರ ಹಿನ್ನೆಲೆಯಲ್ಲಿ ಅತಿದೊಡ್ದ ಪಕ್ಷವಾಗಿ ಹೊರ ಹೊಮ್ಮಿರುವ ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದ್ದರೆ ಇತ್ತ ಬಿಜೆಪಿ ಕೂಡ ಜೆಡಿಎಸ್ ಜೊತೆ ಮೈತ್ರಿಯೊಂದಿಗೆ ಮೇಯರ್ ಸ್ಥಾನಕ್ಕಾಗಿ ತಂತ್ರ ಹೆಣೆದಿದೆ.
ಆದರೆ ಜೆಡಿಎಸ್ ನಾಯಕರು ನಾವು ಬೇರೆ ಪಕ್ಷಕ್ಕೆ ಬೆಂಬಲ ನೀಡಲ್ಲ, ಕಾಂಗ್ರೆಸ್ ಅಥವಾ ಬಿಜೆಪಿ ನಾಯಕರೇ ನಮಗೆ ಬೆಂಬಲ ಕೊಟ್ಟು ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ನೀಡಲಿ ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಲಬುರ್ಗಿಯಲ್ಲಿ ಬಿಜೆಪಿಯವರೇ ಮೇಯರ್ ಆಗುತ್ತಾರೆ. ಇದರಲ್ಲಿ ಅನುಮಾನ ಬೇಡ ಎಂದು ಹೇಳಿದ್ದಾರೆ.
ಈ ಫೋಟೋದ ಹಿಂದಿದೆ ಮನಕಲಕುವ ಘಟನೆ
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ಪಟ್ಟು ಪ್ರಾರಂಭಿಕ ಹಂತ. ಇವೆಲ್ಲ ಆರಂಭಿಕ ಹಂತದಲ್ಲಿ ಚರ್ಚೆಯಾಗುತ್ತೆ ಅಷ್ಟೇ. ಆದರೆ ಒಂದು ವಿಶ್ವಾಸವಿದೆ. ಕಲಬುರ್ಗಿಯಲ್ಲಿ ಬಿಜೆಪಿಯವರೇ ಮೇಯರ್ ಆಗುತ್ತಾರೆ ಎಂದು ಸ್ಪಷ್ಟಪಡಿಸಿದರು.