ಬೆಂಗಳೂರು: ನಮ್ಮ ಗ್ಯಾರಂಟಿ ಯೋಜನೆಗಳು ನಮ್ಮ ಬದ್ಧತೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ ಅವರಿಗೆ ಆತಂಕ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳು ಜೂನ್ ತಿಂಗಳಿಂದಲೇ ಜಾರಿಗೆ ಬರಲಿವೆ ಎಂದು ಹೇಳಿದರು.
200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ 2 ಸಾವಿರ ರೂಪಾಯಿ ಸಹಾಯಧನ, 10ಕೆಜಿ ಉಚಿತ ಅಕ್ಕಿ ಸೇರಿದಂತೆ 5 ಗ್ಯಾರಂಟಿಗಳು ಜೂನ್ ನಲ್ಲೇ ಜಾರಿಗೆ ಬರುತ್ತದೆ. ಭ್ರಷ್ಟಾಚಾರ ತಪ್ಪಿಸಿದರೆ ನಮ್ಮ ಗ್ಯಾರಂಟಿ ಗಳಿಗೆ ಹಣ ಬರುತ್ತದೆ. ಕಾಂಗ್ರೆಸ್ ಗೆ ಎಲ್ಲಾ ವರ್ಗಗಳ ಬಗ್ಗೆಯೂ ಸಹಾನುಭೂತಿಯಿದೆ ಎಂದು ತಿಳಿಸಿದರು.