
ಈ ಘಟನೆಯ ಬಳಿಕ ಹಂತಕರು ವಿಡಿಯೋ ರಿಲೀಸ್ ಮಾಡಿದ್ದು ಪ್ರಧಾನಿ ಮೋದಿ ಹಾಗೂ ನೂಪುರ್ ಶರ್ಮಾರನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಟೇಲರ್ ಕನ್ಹಯ್ಯಲಾಲ್ ಕತ್ತು ಸೀಳಿದ ಆರೋಪಿಗಳನ್ನು ರಾಜ್ಸಮುಂದ್ ಜಿಲ್ಲೆಯ ಭೀಮಾ ಪ್ರದೇಶದಲ್ಲಿ ಬಂಧಿಸಲಾಗಿದೆ. ಆದರೆ ಆಘಾತಕಾರಿ ವಿಚಾರವೇನೆಂದರೆ ಜೂನ್ 17ರಂದೇ ಆರೋಪಿಗಳು ಕನ್ಹಯ್ಯಲಾಲ್ಗೆ ಕೊಲೆ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ಈ ಸಂಬಂಧ ವಿಡಿಯೋ ಕೂಡ ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಬೆದರಿಕೆಯ ಬಳಿಕ ಕನ್ಹಯ್ಯಲಾಲ್ ಪೊಲೀಸರ ಬಳಿ ರಕ್ಷಣೆ ಕೇಳಿದ್ದರು ಎನ್ನಲಾಗಿದೆ. ಆದರೆ ರಾಜಸ್ಥಾನ ಪೊಲೀಸರು ಈ ವಿಚಾರವನ್ನು ನಿರ್ಲಕ್ಷಿಸಿದ್ದೇ ಈ ಎಲ್ಲಾ ಅವಘಡಗಳಿಗೆ ಕಾರಣ ಎನ್ನಲಾಗ್ತಿದೆ.
ಉದಯಪುರದ ಧನ್ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬರ್ಬರ ಕೊಲೆ ನಡೆದಿದೆ. ಮೃತ ಕನ್ಹಯ್ಯ ಲಾಲ್ ಟೈಲರಿಂಗ್ ಮಾಡಿ ಜೀವನ ಸಾಗಿಸುತ್ತಿದ್ದರು.
ವಿಡಿಯೋದಲ್ಲಿ ಕಾಣುವಂತೆ ಬಟ್ಟೆ ಹೊಲಿಸಿಕೊಳ್ಳುವ ನೆಪದಲ್ಲಿ ಅಂಗಡಿಗೆ ನುಗ್ಗಿದ್ದ ಹಂತಕರು ಟೇಲರ್ ಕತ್ತು ಸೀಳಿದ್ದಾರೆ. ಬಳಿಕ ಈ ಬರ್ಬರ ಕೃತ್ಯದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.
https://twitter.com/TajinderBagga/status/1541755611456557057?ref_src=twsrc%5Etfw%7Ctwcamp%5Etweetembed%7Ctwterm%5E1541755611456557057%7Ctwgr%5Ehb_1_10%7Ctwcon%5Es1_&ref_url=https%3A%2F%2Fhindi.opindia.com%2Fnational%2Fheavy-tension-in-udaipur-rajasthan-two-accused-killed-man-by-slitting-his-throat-threats-to-kill-pm-modi-arrested%2F