ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಮುರುಘಾ ಶ್ರೀ ಡಾ.ಶಿವಮೂರ್ತಿ ಶರಣರನ್ನು ಪುರುಷತ್ವ ಪರೀಕ್ಷೆಗಾಗಿ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ತಪಾಸಣೆ ನಡೆದಿದೆ.
ಮುರುಘಾ ಶ್ರೀಗಳಿಗೆ ನಿನ್ನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ವೈದ್ಯಕೀಯ ಪರೀಕ್ಷೆಯಲ್ಲಿ ಮುರುಘಾ ಶ್ರೀಗಳ ರಕ್ತದ ಮಾದರಿ, ಉಗುರು, ಕೂದಲನ್ನು ಸಂಗ್ರಹಿಸಿ ಎಫ್ ಎಸ್ ಎಲ್ ಲ್ಯಾಬ್ ಗೆ ರವಾನಿಸಲಾಗಿತ್ತು.
ಇಂದು ಮುರುಘಾ ಶ್ರೀಗಳ ಪುರುಷತ್ವ ಪರೀಕ್ಷೆಗಾಗಿ ಪೊಲೀಸರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಡಾ.ಸತೀಶ್ ನೇತೃತ್ವದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರ ತಂಡ ವೀರ್ಯದ ಸ್ಯಾಂಪಲ್ ಸಂಗ್ರಹಿಸಿದೆ.
ವೈದ್ಯಕೀಯ ತಪಾಸಣೆ ಬಳಿಕ ಮುರುಘಾ ಶ್ರೀಗಳನ್ನು ಚಿತ್ರದುರ್ಗದ ಡಿ.ವೈ.ಎಸ್.ಪಿ. ಮುಂದೆ ಹಾಜರುಪಡಿಸಲಾಗಿದೆ.