ಚಿಕ್ಕಮಗಳೂರು: ಹುಬ್ಬಳ್ಳಿಯಲ್ಲಾದ ಗಲಭೆ ಅಚಾನಕ್ ಆಗಿ ಸಂಭವಿಸಿದ್ದಲ್ಲ, ಡಿಜೆಹಳ್ಳಿ – ಕೆಜಿಹಳ್ಳಿ ಗಲಾಟೆಗೂ ಹುಬ್ಬಳ್ಳಿ ಗಲಾಟೆಗೂ ಸಾಮ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ದೇಶಾದ್ಯಂತ ಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಇಲ್ಲಿಗೆ ನಿಯಂತ್ರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
UPI ಪಿನ್ ಜನರೇಟ್ ಮಾಡೋದು ಹೇಗೆ ? ಇಲ್ಲಿದೆ ಮಾಹಿತಿ
ಜಿನ್ನಾ ಮನಸ್ಥಿತಿ ಹೊಂದಿದವರು ಸೃಷ್ಟಿಸುತ್ತಿರುವ ಗಲಾಟೆಯನ್ನು ಗಾಂಧಿ ಮನಸ್ಸಿನಿಂದ ಎದುರಿಸಲು ಸಾಧ್ಯವಿಲ್ಲ. ಗಾಂಧಿ ಮನಸ್ಸಿನಿಂದ ಇದನ್ನೆಲ್ಲ ಎದುರಿಸಲು ಹೋದಾಗ ಹಿಂದೆ ಆಗಿದ್ದೇನು ? ದೇಶವೇ ವಿಭಜನೆ ಆಯಿತು. 46 ಲಕ್ಷ ಜನರ ಮಾರಣಹೋಮ ನಡೆಯಿತು. ಹೀಗಾಗಿ ಜಿನ್ನಾ ಮಾನಸಿಕತೆಯವರನ್ನು ನಾವು ಸಾವರ್ಕರ್ ಮನಸ್ಸಿನಿಂದ ಎದುರಿಸಬೇಕು ಎಂದರು.
ಗಲಭೆ ಸೃಷ್ಟಿಸುವುದೇ ಅವರ ಉದ್ದೇಶ. ಅಂತವರನ್ನು ನಿಯಂತ್ರಿಸಲು ಕಠಿಣ ನಿಯಮಗಳನ್ನು ಕೈಗೊಳ್ಳಬೇಕಾಗುತ್ತದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ರೀತಿ ಗಲಭೆಗೆ ಅವಕಾಶ ಕೊಡಬಾರದು ಎಂದು ಹೇಳಿದರು.
ಇನ್ನು ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರವಾಗಿ ಯಾರೇ ಪಾಲುದಾರರಾಗಿದ್ದರೂ ಶಿಕ್ಷೆಯಾಗಬೇಕು. ಕಾಂಗ್ರೆಸ್, ಬಿಜೆಪಿ ಅಥವಾ ಇನ್ಯಾರದ್ದೇ ಕೈವಾಡವಿರಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ನಡೆಸಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ.