ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ತಿರ್ಕುಟ್ ನಲ್ಲಿ ರೋಪ್ ವೇ ಟ್ರಾಲಿಗಳು ಪರಸ್ಪರ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, 40 ಜನರು ಮೇಲೆ ಸಿಕ್ಕಿಹಾಕಿಕೊಂಡಿದ್ದಾರೆ.
ತಾಂತ್ರಿಕ ದೋಷದಿಂದಾಗಿ 10 ರೋಪ್‌ವೇ ಟ್ರಾಲಿಗಳು ಮುಂದಕ್ಕೆ ಚಲಿಸ್ತಾ ಇಲ್ಲ. ಹಾಗಾಗಿ ಟ್ರಾಲಿಗಳಲ್ಲಿ ಸಿಲುಕಿರುವ 40 ಜನರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಕಾರ್ಯಾಚರಣೆ ನಡೆಸುತ್ತಿದೆ.
ಅತಂತ್ರ ಸ್ಥಿತಿಯಲ್ಲಿ ಒದ್ದಾಡ್ತಿರೋ ಪ್ರವಾಸಿಗರಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡಲಾಗ್ತಿದೆ. NDRF ಕಾರ್ಯಾಚರಣೆ ಯಶಸ್ವಿಯಾಗದೇ ಇದ್ದಲ್ಲಿ ರಕ್ಷಣಾ ಕಾರ್ಯಕ್ಕಾಗಿ ಭಾರತೀಯ ವಾಯುಪಡೆಯ ಸಹಾಯವನ್ನು ಪಡೆಯುವುದಾಗಿ ದಿಯೋಘರ್ ಡೆಪ್ಯುಟಿ ಕಮಿಷನರ್ ಮಂಜುನಾಥ ಭಜಂತ್ರಿ ಹೇಳಿದ್ದಾರೆ. ರೋಪ್ ಟ್ರಾಲಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾಳೆ.
ಇನ್ನಿಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಂದು ರೋಪ್ ವೇ ಟ್ರಾಲಿಯ ಪುಲ್ ವೇ, ಮಾರ್ಗಮಧ್ಯೆಯೇ ಸ್ಥಗಿತಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ.