ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಮಸೀದಿಯಲ್ಲಿ ಇಬ್ಬರು ವ್ಯಕ್ತಿಗಳು ಹನುಮಾನ್ ಭಜನೆ, ರಾಮ ಜಪ ಮಾಡಿದ ವಿಡಿಯೋ ವೈರಲ್ ವಿಚಾರಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ನಿನ್ನೆ ಶ್ರೀರಂಗಪಟ್ಟಣ ಚಲೋ ಪ್ರತಿಭಟನೆ ನಡೆಸಿದ್ದ ಹಿಂದೂಪರ ಸಂಘಟನೆ ಹಾಗೂ ಭಜರಂಗದಳ ಕಾರ್ಯಕರ್ತರು, ಜಾಮಿಯಾ ಮಸೀದಿಯಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿಯೇ ಸಿದ್ಧ ಎಂದು ಹೇಳಿಕೆ ನೀಡಿದ್ದರು. ಇದಾದ ಕೆಲ ಹೊತ್ತಲೇ ಇಬ್ಬರು ಮಸೀದಿ ಒಳಗೆ ಜೈ ಶ್ರೀರಾಮ್, ಜೈ ಹನುಮಾನ್ ಎಂದು ಹೇಳುತ್ತಾ ಭಜನೆ ಮಾಡುತ್ತಿರುವ ವಿಡಿಯೋವನ್ನು ವೈರಲ್ ಮಾಡಲಾಗಿತ್ತು.
ಆಸ್ಪತ್ರೆಯಲ್ಲಿ ಪದೇ ಪದೇ ಕೈಕೊಟ್ಟ ಕರೆಂಟ್: ಮೊಬೈಲ್ ಬೆಳಕಲ್ಲೇ ವೈದ್ಯರಿಂದ ಶಸ್ತ್ರಚಿಕಿತ್ಸೆ
ಶ್ರೀರಂಗಪಟ್ಟಣ, ಜಾಮಿಯಾ ಮಸೀದಿ ಸುತ್ತ ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದರೂ ಪೊಲೀಸರ ಕಣ್ತಪ್ಪಿಸಿ ಇಬ್ಬರು ವ್ಯಕ್ತಿಗಳು ಮಸೀದಿಯೊಳಗೆ ಹೋಗಿ ಭಜನೆ ಮಾಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.
ಇದೀಗ ಈ ಸಂದರ್ಭದ ಬಗ್ಗೆ ಸಿಸಿ ಟಿವಿ ದೃಶ್ಯ ಲಭ್ಯವಾಗಿದ್ದು, ಇಬ್ಬರು ವ್ಯಕ್ತಿಗಳು ನಿನ್ನೆ ಅಂದರೆ ಜೂನ್ 4ರಂದು ಮಸೀದಿಗೆ ಹೋಗಿ ಭಜನೆ ಮಾಡಿಲ್ಲ, ಬದಲಾಗಿ ಜೂನ್ 3ರಂದು ಮಸೀದಿಗೆ ತೆರಳಿ ಹುನುಮಾನ್ ಭಜನೆ, ರಾಮ ಭಜನೆ ಮಾಡಿದ್ದು, ಈ ವಿಡಿಯೋವನ್ನು ನಿನ್ನೆ ಭಜರಗಂದಳ ಕಾರ್ಯಕರ್ತರು ಹೇಳಿಕೆ ನೀಡಿದ ಬಳಿಕ ನಿನ್ನೆಯದೆಂದು ಬಿಂಬಿಸುವ ರೀತಿಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.