ತುಮಕೂರು: ವ್ಯಕ್ತಿಯೊಬ್ಬರು ಉದಾರ ಮನಸ್ಸಿನಿಂದ ಜಮೀನು ದಾನ ಮಾಡಲು ಮುಂದಾಗಿ ದಾನ ಪತ್ರ ನೋಂದಣಿಗೆ ಬಂದವರಿಂದ ಸಬ್ ರಿಜಿಸ್ಟ್ರಾರ್ ಲಂಚಕ್ಕೆ ಬೇಡಿಕೆಯಿಟ್ಟು ಇದೀಗ ಜೈಲುಶಿಕ್ಷೆಗೆ ಗುರಿಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಮಧುಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸಿಯೊಬ್ಬರ ಜಮೀನು ದಾನ ಪತ್ರ ನೋಂದಣಿ ಮಾಡಿಕೊಡಲು ಮಧುಗಿರಿ ಸಬ್ ರಿಜಿಸ್ಟ್ರಾರ್ ರಾಮಚಂದ್ರಯ್ಯ 4,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ತುಮಕೂರು ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಸಬ್ ರಿಜಿಸ್ಟ್ರಾರ್ ಅವರ ಲಂಚಬಾಕತನ ಬಯಲಾದ ಹಿನ್ನೆಲೆಯಲ್ಲಿ ಎಸಿಬಿ ರಘುಕುಮಾರ್, ರಾಮಚಂದ್ರಯ್ಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇದೀಗ ಮಧುಗಿರಿ 7ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ನ್ಯಾಯಾಧೀಶ ಎಸ್.ಸುಧೀಂದ್ರನಾಥ್, ಸಬ್ ರಿಜಿಸ್ಟ್ರಾರ್ ರಾಮಚಂದ್ರಯ್ಯ ಗೆ 4 ವರ್ಷ ಜೈಲುಶಿಕ್ಷೆ ಹಾಗೂ 8000 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.