ಮೈಸೂರು: ವರುಣಾದಲ್ಲಿ ಸಿದ್ದರಾಮಯ್ಯ ಪರ ಸ್ಟಾರ್ ನಟ, ನಟಿಯರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಸಿದ್ದರಾಮಯ್ಯ ಸೋಲುವ ಭೀತಿಯಲ್ಲಿ ಹತಾಶರಾಗಿದ್ದಾರೆ. ಅದಕ್ಕೆ ಸ್ಟಾರ್ ಗಳನ್ನು ಕರೆತಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಸೋಮಣ್ಣ, ಒಂದೇ ಒಂದು ಬಾರಿ ವರುಣಾಗೆ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಈಗ ಪದೇ ಪದೇ ಬರುತ್ತಿದ್ದಾರೆ. ಹತಾಶರಾಗಿ ಜನರನ್ನು ಸೇರಿಸಲು ಸ್ಟಾರ್ ಗಳ ಜೊತೆ ಬಂದಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಪ್ರಚಾರ ಮಾಡಲು ಸ್ಟಾರ್ ಗಳ ಜೊತೆ ಬಂದು ಪ್ರಚಾರ ಮಾಡುತ್ತಿದ್ದಾರೆ. ಜನರನ್ನು ಸೇರಿಸಿದ್ದಾರೆ ನನಗೆ ಅದೇ ಖುಷಿ ಎಂದು ಹೇಳಿದರು.