ಬೆಂಗಳೂರು: ಮತಗಟ್ಟೆಯಲ್ಲಿ ಉದ್ಧಟತನ ಆರೋಪ ಹಿನ್ನೆಲೆಯಲ್ಲಿ ಮಹಿಳಾ ಇನ್ಸ್ ಪೆಕ್ಟರ್ ಓರ್ವರನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಭವ್ಯಾ ಅಮಾನತುಗೊಂಡಿರುವ ಮಹಿಳಾ ಇನ್ಸ್ ಪೆಕ್ಟರ್. ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿ ಆಯೋಜನೆ ಮಾಡಲಾಗಿತ್ತು. ಆದರೆ ಇನ್ಸ್ ಪೆಕ್ಟರ್ ಭ್ಯವ್ಯಾ ತರಬೇತಿಗೆ ಹಾಜರಾಗದೇ ಪೇಪರ್ ಓದುತ್ತಾ ಕುಳಿತಿದ್ದರು.
ನೋಡಲ್ ಅಧಿಕಾರಿ ಹಾಗೂ ಸೆಕ್ಟರ್ ಅಧಿಕಾರಿ ಇದನ್ನು ಪ್ರಶ್ನಿಸಿದಾಗ ಉದ್ಧಟತನ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಜಿಲ್ಲಾ ಚುನಾವಣಾಧಿಕಾರಿ ಇನ್ಸ್ ಪೆಕ್ಟರ್ ಭವ್ಯಾ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.