ಯುಗಾದಿ ಸೇರಿದಂತೆ ಹಬ್ಬಗಳ ಸರಣಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಶುಭ ಸಮಾರಂಭಗಳು ಸಹ ನಡೆಯಲಿದ್ದು, ಇದರ ಮಧ್ಯೆ ಹಬ್ಬ ಹರಿದಿನ ಹಾಗೂ ಮದುವೆ ಇತ್ಯಾದಿ ಸಮಾರಂಭಗಳಿಗೆ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ.
ಅಮೆರಿಕಾ ಹಾಗೂ ಯುರೋಪ್ ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು ಮುಂದುವರೆದಿರುವ ಕಾರಣ ಇನ್ನು ಕೆಲವೇ ದಿನಗಳಲ್ಲಿ ಹಳದಿ ಲೋಹ ಚಿನ್ನದ ಬೆಲೆ 60,000 ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಬೆಳ್ಳಿ ಬೆಲೆಯಲ್ಲಿಯೂ ಸಹ ಏರಿಕೆ ಕಾಣಬಹುದು ಎಂದು ಹೇಳಲಾಗಿದೆ.
ಚಿನ್ನದ ಬೆಲೆ ಈಗಾಗಲೇ ಏರು ಗತಿಯಲ್ಲಿದ್ದು, ಶುಕ್ರವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠದರ 10 ಗ್ರಾಂ ಗೆ 59,461 ರೂಪಾಯಿ ತಲುಪಿದ್ದು, ದಿನದ ಅಂತ್ಯದಲ್ಲಿ 59,420 ಗಳಿಗೆ ಸ್ಥಿರವಾಗಿದೆ. ಹಾಗೆಯೇ ಬೆಳ್ಳಿ ಬೆಲೆಯಲ್ಲಿಯೂ ಸಹ ಏರಿಕೆಯಾಗಿದ್ದು ಪ್ರತಿ ಕೆಜಿಗೆ 68,275 ರೂಪಾಯಿ ತಲುಪಿದೆ. ಇನ್ನೂ ಕೆಲವು ದಿನಗಳ ಕಾಲ ಇದೆ ವಿದ್ಯಾಮಾನ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.