ಆಪತ್ಕಾಲದಲ್ಲಿ ನೆರವಾಗುತ್ತದೆ ಎಂಬ ಕಾರಣಕ್ಕೆ ಭಾರತೀಯರು ಚಿನ್ನ ಖರೀದಿಯತ್ತ ಹೆಚ್ಚಿನ ಒಲವು ತೋರುತ್ತಾರೆ. ಆದರೆ ಕೋವಿಡ್ ಲಾಕ್ ಡೌನ್ ಕಾರಣಕ್ಕೆ ಆರ್ಥಿಕವಾಗಿ ತೀವ್ರ ಪೆಟ್ಟು ಬಿದ್ದ ಪರಿಣಾಮ ಚಿನ್ನ ಖರೀದಿ ಇಳಿಮುಖವಾಗಿತ್ತು.
ಆದರೆ ಈಗ ಆರ್ಥಿಕತೆ ಮತ್ತೆ ಹಳಿಗೆ ಮರಳಿದ್ದು, ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲಾರಂಬಿಸಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದ ಏಪ್ರಿಲ್ ನಿಂದ ಜೂನ್ ಅವಧಿಯ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯಲ್ಲಿ ಶೇಕಡ 43 ರಷ್ಟು ಹೆಚ್ಚಳವಾಗಿದೆ.
2022ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಚಿನ್ನಾಭರಣದ ಬೇಡಿಕೆಯಲ್ಲಿ ಶೇಕಡ 49 ರಷ್ಟು ಹೆಚ್ಚಳವಾಗಿದ್ದು, ಬರೋಬ್ಬರಿ 140.3 ಟನ್ ಚಿನ್ನ ಮಾರಾಟವಾಗಿದೆ. ಆದರೆ ಕಳೆದ ವರ್ಷದ ಇದೆ ಅವಧಿಯಲ್ಲಿ ಕೇವಲ 94 ಟನ್ ಚಿನ್ನ ಮಾರಾಟವಾಗಿತ್ತು ಎಂದು ಮೂಲಗಳು ತಿಳಿಸಿವೆ.