ಬೆಂಗಳೂರು: ಜೆ.ಜೆ.ನಗರದಲ್ಲಿ ಏಪ್ರಿಲ್ 4ರಂದು ನಡೆದಿದ್ದ ಚಂದ್ರು ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಉರ್ದು ಭಾಷೆ ಮಾತನಾಡಿಲ್ಲ ಎಂದೇ ಕೊಲೆ ಮಾಡಲಾಗಿದೆ ಎಂದು ಚಂದ್ರು ಸ್ನೇಹಿತ ಹೇಳಿದ್ದಾನೆ.
ಘಟನೆ ನಡೆದಿದ್ದ ವೇಳೆ ಚಂದ್ರು ಜತೆಗಿದ್ದ ಸ್ನೇಹಿತ ಸೈಮನ್, ನಮ್ಮ ಬೈಕ್ ಟಚ್ ಮಾಡಿ ಉರ್ದುವಿನಲ್ಲಿ ಕೆಟ್ಟದಾಗಿ ಬೈಯ್ಯಲು ಆರಂಭಿಸಿದ್ದರು. ಬಳಿಕ ಚಂದ್ರುವಿನ ತೊಡೆಗೆ ಚಾಕು ಇರಿದಿದ್ದಾರೆ. ಸುಮಾರು 20 ಜನರಿದ್ದರೂ ಯಾರೊಬ್ಬರೂ ತಪ್ಪಿಸಲು ಬಂದಿಲ್ಲ. ನನ್ನ ಮೇಲೂ ದಾಳಿಗೆ ಮುಂದಾಗಿದ್ದರು ತಪ್ಪಿಸಿಕೊಂಡು ಓಡಿದೆ. ಉರ್ದು ಬರಲ್ಲ ಅಂತಾನೇ ಚಂದ್ರು ಮರ್ಡರ್ ಆಗಿದ್ದು ಎಂದು ಹೇಳಿದ್ದಾನೆ.
ನಾನು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಬಳಿಕ ಚಂದ್ರುಗೆ ಕಾಲ್ ಮಾಡಿದೆ. ಆದರೆ ಆತ ರಿಸೀವ್ ಮಾಡಿಲ್ಲ. ಮತ್ತೆ ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಚಂದ್ರು ಸ್ಥಿತಿ ಗಂಭೀರವಾಗಿತ್ತು. ಕಷ್ಟಪಟ್ಟು ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿಸಿದ್ದಾನೆ. ಅಲ್ಲಿದ್ದವರು ಯಾರಾದರೂ ಸಹಾಯ ಮಾಡಿದ್ದರೆ ಆತ ಬದುಕುಳಿಯುತ್ತಿದ್ದ ಎಂದು ಕಣ್ಣಿರಿಟ್ಟಿದ್ದಾನೆ.