ಹುಬ್ಬಳ್ಳಿ; ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಗುರೂಜಿಯವರ ಪರಿಚಯದವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಘಟನೆ ದಿಗ್ಭ್ರಾಂತಿ ಮೂಡಿಸಿದೆ. ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಮನುಷ್ಯರು ಮಾಡುವಂತದ್ದಲ್ಲ, ಇದೊಂದು ರಾಕ್ಷಸಿ ಮನಸ್ಸಿನವರ ಕೃತ್ಯ. ಹೋಟೆಲ್ ರೂಮಿನಲ್ಲಿದ್ದ ಗುರೂಜಿಯವರನ್ನು ಪರಿಚಯದವರೇ ಕೆಳಗೆ ಬರುವಂತೆ ಕರೆಸಿಕೊಂಡಿದ್ದಾರೆ. ಹತ್ಯೆ ಮಾಡಿದಾತ ಓರ್ವ ಗುರೂಜಿಯ ಕಚೇರಿಯ ಮಾಜಿ ಸಿಬ್ಬಂದಿಯಾಗಿರುವ ಅನುಮಾನ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಗುರೂಜಿ ಓರ್ವ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಕಚೇರಿಯ ಮಾಜಿ ಸಿಬ್ಬಂದಿಯೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಪರಿಚಯದವರಿಂದಲೇ ಗುರೂಜಿ ಹತ್ಯೆಯಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.