ಗುಜರಾತ್ ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು ಬಿದ್ದ ಪರಿಣಾಮ 135 ಮಂದಿ ಮೃತಪಟ್ಟಿದ್ದರು. ದುರಸ್ತಿಗಾಗಿ ಕಳೆದ ಏಳು ತಿಂಗಳಿನಿಂದ ಬಂದ್ ಆಗಿದ್ದ ಈ ಸೇತುವೆ ದುರಂತ ಸಂಭವಿಸುವ ಐದು ದಿನಗಳ ಹಿಂದಷ್ಟೇ ಸಾರ್ವಜನಿಕ ಬಳಕೆಗೆ ಮುಕ್ತವಾಗಿತ್ತು.
ಮೊರ್ಬಿಯಲ್ಲಿ ಸಂಭವಿಸಿದ ದುರಂತದ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಅರಣ್ಯ ಇಲಾಖೆ, ಈಗ ಕೊಡಗು ಜಿಲ್ಲೆ ಕುಶಾಲ ನಗರದ ಕಾವೇರಿ ನಿಸರ್ಗಧಾಮದಲ್ಲಿರುವ ತೂಗು ಸೇತುವೆಯನ್ನು ದುರಸ್ತಿಗೊಳಿಸಲು ಮುಂದಾಗಿದೆ.
ಹೀಗಾಗಿ ನವೆಂಬರ್ 8 ರಿಂದ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದ್ದು, ದುರಸ್ತಿ ಪೂರ್ಣಗೊಂಡ ಬಳಿಕ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಇನ್ನು ಹಾರಂಗಿ ಸಸ್ಯೋದ್ಯಾನ ಹಾಗೂ ಸಾಕಾನೆ ಶಿಬಿರವು ಪ್ರವಾಸಿಗರಿಗೆ ಎಂದಿನಂತೆ ವೀಕ್ಷಣೆಗೆ ತೆರೆದಿರುತ್ತದೆ.