ಮುಂಬೈನ ಬೊಯ್ಸರ್ ಎಂಬಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಂದಿದ್ದಾನೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಟೀಮಾ ಆಸ್ಪತ್ರೆಯ ಬಳಿ ಶ್ರೀಕೃಷ್ಣ ಯಾದವ್ ಮತ್ತವನ ಪ್ರೇಯಸಿ ನೇಹಾ ಮಹತೋ ಮಧ್ಯೆ ವಾಗ್ವಾದ ನಡೀತು.
ಈ ವೇಳೆ ಸಿಟ್ಟಿಗೆದ್ದ ಯಾದವ್ ತನ್ನ ಜೇಬಿನಿಂದ ಪಿಸ್ತೂಲ್ ತೆಗೆದು ನೇಹಾಗೆ ಗುಂಡು ಹಾರಿಸಿದ್ದಾನೆ. ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಸಾರ್ವಜನಿಕರ ಕೈಗೆ ಸಿಕ್ಕಿಬೀಳಬಹುದು ಅನ್ನೋ ಭಯದಲ್ಲಿ ಆರೋಪಿ ಶ್ರೀಕೃಷ್ಣ ಯಾದವ್ ಅಲ್ಲಿಂದ ಓಡಿದ್ದಾನೆ.
ಈ ವೇಳೆ ವೇಗವಾಗಿ ಬರ್ತಾ ಇದ್ದ ಯುದ್ಧ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯ್ತು. ಆದ್ರೆ ಆತ ಅಷ್ಟರಲ್ಲಿ ಮೃತಪಟ್ಟಿದ್ದ. ಮಾಡಿದ್ದುಣ್ಣೋ ಮಹರಾಯ ಎಂಬಂತೆ ಕ್ಷುಲ್ಲಕ ಕಾರಣಕ್ಕೆ ಗೆಳತಿಯ ಪ್ರಾಣತೆಗೆದ ಯುವಕನಿಗೆ ವಿಧಿಯೇ ತಕ್ಕ ಶಿಕ್ಷೆ ಕೊಟ್ಟಿದೆ. ಹಾಡಹಗಲಲ್ಲೇ ಈ ಘಟನೆ ನಡೆದಿದೆ.
https://twitter.com/News18lokmat/status/1575348340816228355?ref_src=twsrc%5Etfw%7Ctwcamp%5Etweetembed%7Ctwterm%5E1575348340816228355%7Ctwgr%5E92f75a08e424df418ca10fcda2eb73c6fc7455b6%7Ctwcon%5Es1_&ref_url=https%3A%2F%2Fwww.latestly.com%2Fsocially%2Findia%2Fnews%2Fvideo-man-shoots-dead-girlfriend-in-broad-daylight-in-mumbais-boisar-later-dies-after-being-hit-by-vehicle-4264034.html