ಯಾದಗಿರಿ: ಕರ್ತವ್ಯಲೋಪವೆಸಗಿದ್ದ ಹಿನ್ನೆಲೆಯಲ್ಲಿ ಪಿ ಎಸ್ ಐ ಸುರೇಶ್ ಹಾಗೂ ಮೂವರು ಕಾನ್ಸ್ ಟೇಬಲ್ ಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಯಾದಗಿರಿಯಲ್ಲಿ ನಿನ್ನೆ ನಡೆದ ಬಿಜೆಪಿ ಜನಾಶಿರ್ವಾದ ಯಾತ್ರೆ ವೇಳೆ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸ್ವಾಗತಿಸುವ ಕಾರ್ಯಕ್ರಮದ ವೇಳೆ ಪೊಲಿಸರು ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವರನ್ನು ಸ್ವಾಗತಿಸಿದ್ದರು. ಪಿ ಎಸ್ ಐ ಹಾಗೂ ಮೂವರು ಪಿಸಿಗಳ ವಿರುದ್ಧ ಕರ್ತವ್ಯಲೋಪ ಪ್ರಕರಣ ದಾಖಲಾಗಿತ್ತು.
ಖುಷಿ ಸುದ್ದಿ….! ಮುಂದಿನ ತಿಂಗಳು ಮಕ್ಕಳಿಗೆ ಬರಲಿದೆ ಕೊರೊನಾ ಲಸಿಕೆ
ಇದೀಗ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಯಾದಗಿರಿ ಗ್ರಾಮಾಂತರ ಠಾಣೆ ಪಿ ಎಸ್ ಐ ಸುರೇಶ್ ಹಾಗೂ ಮೂವರು ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಿ ಯಾದಗಿರಿ ಎಸ್ ಪಿ ಸಿ.ಬಿ. ವೇದಮೂರ್ತಿ ಆದೇಶ ಹೊರಡಿಸಿದ್ದಾರೆ.