ನವದೆಹಲಿ: ದೇಶ ವಿಭಜನೆಗೆ ನೆಹರೂ ಮುಂದಾದರೂ ಅದನ್ನು ತಡೆಯಲು ಮಹಾತ್ಮಾ ಗಾಂಧಿಜೀ ಏನೂ ಮಾಡಲಾಗಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ,ಟಿ.ರವಿ, ಎರಡನೇ ಮಹಾಯುದ್ಧದ ಪರಿಣಾಮ ಬ್ರಿಟೀಷರು ಸಾಮರ್ಥ್ಯ ಕಳೆದುಕೊಂಡರು ಹಾಗಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದೇಶಗಳಿಗೆ ಬ್ರಿಟೀಷರು ಸ್ವಾತಂತ್ರ್ಯ ನೀಡಿದರು. ಗಾಂಧಿ ಹೋರಾಟದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಎಂದು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಗಾಂಧಿ ಜನಸಮೂಹ ಒಗ್ಗೂಡಿಸಿದರು, ಕ್ರಾಂತಿಕಾರಿಗಳು ಹೋರಾಟ ಮಾಡಿದರು ಎಂದು ಹೇಳಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಸಿಕ್ಕಿದ್ದಾದರೂ ಏನು? ಜವಾಹರ ಲಾಲ್ ನೆಹರೂ ದೇಶ ವಿಭಜನೆ ಮಾಡಿದ ಉದಾರವಾದಿ, ನೆಹರೂ ಜಿನ್ನಾ ಸೇರಿ ದೇಶ ಒಡೆದರು. ಗಾಂಧಿಜಿ ಸುಮ್ಮನಿದ್ದರು. ಗಾಂಧಿಜಿಯಲ್ಲಿಯೂ ದೌರ್ಬಲ್ಯಗಳಿದ್ದವು ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ದೇಶ ವಿಭಜನೆಯಾದ ಪರಿಣಾಮ ಅತ್ಯಾಚಾರ, ಮತಾಂತರಗಳು ನಡೆದವು ಎಂದು ಹೇಳಿದ್ದಾರೆ.
ದೇಶ ವಿಭಜನೆಯಾಗುತ್ತಿರುವುದನ್ನು ಅರ್ಥ ಮಾಡಿಕೊಂಡ ಸಾವರ್ಕರ್ ಹಿಂದೂಗಳಿಗೆ ಸೇನೆಯಲ್ಲಿ ಹೆಚ್ಚಿನ ಜನ ಸೇರಲು ಕರೆ ಕೊಟ್ಟರು. ಒಂದೊಮ್ಮೆ ಸೇನೆಯಲ್ಲಿ ಮುಸ್ಲಿಂ ಸಂಖ್ಯೆ ಹೆಚ್ಚಾಗಿದ್ದರೆ ಇಂದು ಕಾಶ್ಮೀರ, ದೆಹಲಿ ಅಲ್ಲ ಇಡೀ ಭಾರತವೇ ಉಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ. ಸಿ.ಟಿ ರವಿಯವರ ಈ ಹೇಳಿಕೆಗಳು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.