ಹುಬ್ಬಳ್ಳಿ: ಉಪಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ವಾಕ್ಸಮರ ಜೋರಾಗಿದ್ದು, ಕಾಂಗ್ರೆಸ್ ನ ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರ ‘ಗಾಂಧಿ ನಡಿಗೆ ಕೃಷ್ಣೆ ಕಡೆಗೆ’ ಅಭಿಯಾನದ ಬಗ್ಗೆ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.
BIG NEWS: ನೈತಿಕ ಪೊಲೀಸ್ ಗಿರಿ ಪ್ರಕರಣ; ಪೊಲೀಸರು ಅಧಿಕಾರವನ್ನು ಬಿಜೆಪಿಗೆ ಕೊಟ್ಟುಬಿಟ್ಟಿದ್ದಾರೆ; ಡಿ.ಕೆ.ಶಿ. ವಾಗ್ದಾಳಿ
ಹುಬ್ಬಳ್ಳಿಯಲ್ಲಿ ಮಾತನಾಡಿದ ಕಾರಜೋಳ, ಎಸ್.ಆರ್. ಪಾಟೀಲ್ ಅಭಿಯಾನ ಸಿಂಧಗಿ ಉಪಚುನಾವಣೆಯ ಗಿಮಿಕ್ ಅಷ್ಟೇ. ಯಾವಾಗ ಚುನಾವಣೆಗಳು ಬರುತ್ತೋ ಆಗೆಲ್ಲ ಒಂದಲ್ಲ ಒಂದು ರೀತಿಯ ಗಿಮಿಕ್ ಗಳನ್ನು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
1000 ಕೋಟಿ ವೆಚ್ಚದ ನೀರಾವರಿ ಯೋಜನೆಗೆ ಬಸವರಾಜ್ ಬೊಮ್ಮಾಯಿ ಅವರು 2008-13ರ ವೇಳೆಗೆ ಚಾಲನೆ ನೀಡಿದ್ದರು. ಆದರೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಏನನ್ನೂ ಮಾಡಲಿಲ್ಲ. ಈಗ ಎಸ್.ಆರ್. ಪಾಟೀಲ್, ಗಾಂಧಿ ನಡಿಗೆ ಕೃಷ್ಣೆ ಕಡೆಗೆ ಎಂಬ ಅಭಿಯಾನದ ಮೂಲಕ ಹೊಸ ನಾಟಕವಾಡುತ್ತಿದ್ದಾರೆ. ಸಿಂದಗಿ ಚುನಾವಣೆಯಲ್ಲಿ ಅವರ ಈ ನಾಟಕ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಉಪಚುನಾವಣೆಯಲ್ಲಿ ಹಾನಗಲ್ ಹಾಗೂ ಸಿಂದಗಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಈಗಾಗಲೇ ಬಿಜೆಪಿ ಪರವಾದ ಸಮೀಕ್ಷೆಗಳ ವರದಿಗಳೂ ಇದನ್ನೇ ಹೇಳುತ್ತಿವೆ. ಕಾಂಗ್ರೆಸ್ ನ ಯಾವುದೇ ಗಿಮಿಕ್ ಈ ಚುನಾವಣೆಯಲ್ಲಿ ನಡೆಯಲ್ಲ ಎಂದರು.