alex Certify BIG NEWS: ಗರೀಬಿ ಹಠಾವೊ ಎಂದು ನಿಮ್ಮ ಅಜ್ಜಿ ಘೋಷಿಸಿ 5 ದಶಕ ಕಳೆದಿದೆ; ಇನ್ನೂ ಬಡವರ ಹೆಸರಿನಲ್ಲಿ ವೋಟ್ ಬ್ಯಾಂಕ್ ಮಾಡಲು ನಾಚಿಕೆ ಆಗಲ್ಲವೇ ? ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗರೀಬಿ ಹಠಾವೊ ಎಂದು ನಿಮ್ಮ ಅಜ್ಜಿ ಘೋಷಿಸಿ 5 ದಶಕ ಕಳೆದಿದೆ; ಇನ್ನೂ ಬಡವರ ಹೆಸರಿನಲ್ಲಿ ವೋಟ್ ಬ್ಯಾಂಕ್ ಮಾಡಲು ನಾಚಿಕೆ ಆಗಲ್ಲವೇ ? ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ರಾಹುಲ್ ಗಾಂಧಿ ವಿರುದ್ಧ ರಾಜ್ಯ ಬಿಜೆಪಿ ಸರಣಿ ವಾಗ್ದಾಳಿ ಮುಂದುವರೆಸಿದೆ. ಕರ್ನಾಟಕದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದ ನಕಲಿ ಗಾಂಧಿ ಕುಡಿ ರಾಹುಲ್ ಗಾಂಧಿ ಅವರೇ, ಮುಖ್ಯಮಂತ್ರಿ ಸ್ಥಾನಕ್ಕಾಗಿ ನಿಮ್ಮೆದುರು ಕೈಕಟ್ಟಿ “ಜೀ ಹುಜೂರ್” ಎನ್ನುವ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಮಾತು ಕೇಳಿ ಆರೋಪ ಮಾಡುವ ಬದಲು ರಾಜ್ಯದ ಜನರ ಬಾಯಿಂದ ಸತ್ಯ ತಿಳಿಯಿರಿ ಎಂದು ಹೇಳಿದೆ.

ರಾಜ್ಯ ಬಿಜೆಪಿ ಸರ್ಕಾರ ರೈತರ ಮಕ್ಕಳು, ಕಾರ್ಮಿಕರು, ನೇಕಾರರು, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದು, 14 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ‌. ಗುಲಾಮಗಿರಿಯನ್ನೇ ನಂಬಿರುವ ಕಾಂಗ್ರೆಸ್ ಪಕ್ಷಕ್ಕೆ ರೈತರು, ಕಾರ್ಮಿಕರ ಮಕ್ಕಳು ಸುಶಿಕ್ಷಿತರಾಗುವುದು ಬೇಕಿಲ್ಲವೇ? ಎಂದು ಪ್ರಶ್ನಿಸಿದೆ.

ರಾಹುಲ್‌ ಗಾಂಧಿಯವರೇ, ಗರೀಬಿ ಹಠಾವೊ ಎಂದು ನಿಮ್ಮ ಅಜ್ಜಿ ಘೋಷಿಸಿ ಐದು ದಶಕ ಕಳೆದಿದೆ. ಇನ್ನೂ ಬಡವರ ಹೆಸರಿನಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಮೋದಿ ಸರ್ಕಾರ ಜಾರಿಗೊಳಿಸಿದ ಕಿಸಾನ್ ಸಮ್ಮಾನ್ ಯೋಜನೆಯಿಂದ ರಾಜ್ಯದಲ್ಲಿ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆದು ನೆಮ್ಮದಿಯಿಂದ ಕೃಷಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರೈತನಿಗೆ ಏನೂ ಮಾಡದೇ ಈಗ ರೈತರ ಹೆಸರಲ್ಲಿ ಬೀದಿ ನಾಟಕ ಮಾಡಲು ನಾಚಿಕೆಯಾಗುವುದಿಲ್ಲವೇ? ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ದೇಶದಲ್ಲಿ ಸೌಹಾರ್ದತೆ ಇಲ್ಲ ಎನ್ನುವ ರಾಹುಲ್ ಗಾಂಧಿ ಅವರೇ, ಪಿಎಫ್ಐನಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಿದಾಗ ವಿರೋಧಿಸಿದ್ದೇಕೆ? ರಾಷ್ಟ್ರವಾದಿ ಮುಸಲ್ಮಾನರೇ ಉಗ್ರ ಸಂಘಟನೆಗಳ ನಿಷೇಧವನ್ನು ಸ್ವಾಗತಿಸಿರುವಾಗ ಸಿದ್ದರಾಮಯ್ಯ ಅವರಂತಹ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ ಮಾತ್ರ ಇದು ಬಿಸಿ ತುಪ್ಪವಾಗಿದೆ. ಭ್ರಷ್ಟಾಚಾರವನ್ನೇ ನರನಾಡಿಗಳಲ್ಲಿ ತುಂಬಿಸಿಕೊಂಡಿರುವ ನಕಲಿಗಾಂಧಿ ಕುಟುಂಬ ಮತ್ತು ಕಾಂಗ್ರೆಸ್‌ ಪಕ್ಷ ಇತರರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವುದು ಚೋದ್ಯ. ಬೇಲ್ ಮೇಲೆ ಜೀವನ ನಡೆಸುವವರು ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಹಾಸ್ಯಾಸ್ಪದ. ಆರೋಪಕ್ಕೆ ಸೂಕ್ತ ದಾಖಲೆ ಒದಗಿಸದೆ ಪಲಾಯನವಾದ ಅನುಸರಿಸುತ್ತಿರುವುದೇಕೆ?

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಎಲ್ಲರ ಮನೆಗೂ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ 80 ಕೋಟಿ ಬಡವರಿಗೆ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತ ಆಹಾರ ವಿತರಣೆ ಮಾಡಿದೆ. ರಾಹುಲ್‌ ಗಾಂಧಿಗೆ ಇವೆಲ್ಲ ಏಕೆ ಕಾಣಿಸುತ್ತಿಲ್ಲ? ಎಂದು ಪ್ರಶ್ನಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...