ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕದ ನಡುವೆ ಇದೀಗ ನಿಫಾ ವೈರಸ್ ಭೀತಿ ಕೂಡ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಬಿಬಿಎಂಪಿ ಷರತ್ತುಗಳ ಮೇಲೆ ಷರತ್ತು ವಿಧಿಸಿದೆ.
ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ 5 ದಿನಗಳ ಕಾಲ ಅವಕಾಶ ನೀಡಿತ್ತು. ಆದರೆ ಬಿಬಿಎಂಪಿ ಬೆಂಗಳೂರಿಗೆ ಪ್ರತ್ಯೇಕ ಗಣೇಶೋತ್ಸವ ಗೈಡ್ ಲೈನ್ ಪ್ರಕಟಿಸಿದ್ದು, 3 ದಿನಗಳು ಮಾತ್ರ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿದೆ.
ಹೊಸ ಗೈಡ್ ಲೈನ್:
ವಾರ್ಡ್ ಗೆ 1 ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ
ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಆಯೋಜಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು.
ಇನ್ಸ್ ಪೆಕ್ಟರ್, ಎಸಿಪಿಗಳು ಪರಿಶೀಲಿಸಿದ ಸ್ಥಳದಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ
3 ದಿನಕ್ಕಿಂತ ಹೆಚ್ಚು ದಿನ ಗಣೇಶ ಮೂರ್ತಿ ಇಡುವಂತಿಲ್ಲ
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬಿಬಿಎಂಪಿ, ಸ್ಥಳೀಯ ಪೊಲೀಸರ ಅನುಮತಿ ಕಡ್ಡಾಯ
ಗಣೇಶ ಮೂರ್ತಿಯನ್ನು ಮೊಬೈಲ್ ಟ್ಯಾಂಕ್ ಅಥವಾ ಕೃತಕ ವಿಸರ್ಜನಾ ಕೇಂದ್ರದಲ್ಲಿ ಮಾತ್ರ ವಿಸರ್ಜನೆ ಮಾಡಬೇಕು
ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಬಂಧ