ಚಿಲಿಯ ಅಟಕಾಮಾ ಮರುಭೂಮಿ ಪ್ರದೇಶದಲ್ಲಿ ನಿಗೂಢವಾಗಿ ಭೂಮಿ ಬಾಯ್ತೆರೆದಿದೆ. ಬೃಹತ್ ಗಾತ್ರದ ಹೊಂಡವೊಂದು ಸೃಷ್ಟಿಯಾಗಿದ್ದು, ಜನರನ್ನು ದಿಗ್ಭ್ರಮೆಗೊಳಿಸಿದೆ. ಜುಲೈ 30ರಂದು ಈ ಹೊಂಡ ಮೊದಲು ಪತ್ತೆಯಾಯ್ತು. ಇದು 82 ಅಡಿ ಅಗಲವಿದ್ದು, 650 ಅಡಿ ಆಳವಿದೆ ಎಂದು ಅಂದಾಜಿಸಲಾಗಿದೆ.
ಎರಡು ದಿನಗಳಲ್ಲೇ ಇದರ ಅಗಲ ಮತ್ತಷ್ಟು ವಿಸ್ತರಿಸಿದ್ದು, ಇನ್ನೂ ಕೂಡ ಅಗಲವಾಗಿ ಇದು ಬಾಯ್ದೆರೆದುಕೊಳ್ಳಲಿದೆ ಅಂತಾ ಹೇಳಲಾಗ್ತಿದೆ. ಕೆನಡಾದ ಲುಂಡಿನ್ ಮೈನಿಂಗ್ ಕಂಪನಿ, ತಾಮ್ರದ ಗಣಿಗಾರಿಕೆ ಮಾಡ್ತಿರೋ ಪ್ರದೇಶದಲ್ಲೇ ಈ ಬೃಹತ್ ಕುಳಿ ಸೃಷ್ಟಿಯಾಗಿದೆ.
ಈ ಪ್ರದೇಶಕ್ಕೆ ಯಾರೂ ಬರದಂತೆ ಎಚ್ಚರಿಕೆ ವಹಿಸಲಾಗಿದೆ. ಸಂಬಂಧಿತ ನಿಯಂತ್ರಕ ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಲಾಗಿದೆ. ಸಿಬ್ಬಂದಿ, ಉಪಕರಣಗಳು ಅಥವಾ ಮೂಲಸೌಕರ್ಯಕ್ಕೆ ಇದರಿಂದ ಯಾವುದೇ ತೊಂದರೆಯಾಗಿಲ್ಲ. ಈ ರಂಧ್ರ ಸೃಷ್ಟಿಯಾಗಿದ್ದು ಹೇಗೆ ಎಂಬುದರ ಬಗ್ಗೆ ಭೂವಿಜ್ಞಾನ ಮತ್ತು ಗಣಿಗಾರಿಕೆಯ ರಾಷ್ಟ್ರೀಯ ಸೇವೆ (ಸೆರ್ನಾಜಿಯೊಮಿನ್) ತನಿಖೆ ನಡೆಸುತ್ತಿದೆ.
ಈ ಸ್ಥಳದಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ. ಆದ್ರೆ ನಾವು ಅಲ್ಲಿ ಯಾವುದೇ ವಸ್ತುವನ್ನು ಪತ್ತೆ ಮಾಡಿಲ್ಲ, ಆದರೆ ಬಹಳಷ್ಟು ನೀರಿನ ಉಪಸ್ಥಿತಿ ಇದೆ ಎಂದು ಕಂಪನಿ ಹೇಳಿದೆ. ಸಿಂಕ್‌ಹೋಲ್‌ಗ ಸೃಷ್ಟಿಯಾಗಲು ಕಾರಣ ಏನು ಎಂಬ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
ಈ ಬೃಹತ್ ಹೊಂಡ ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿದೆ. ಈ ಪ್ರದೇಶ ಗಣಿಗಾರಿಕೆ ನಿಕ್ಷೇಪಗಳು ಮತ್ತು ಭೂಗತ ಕೆಲಸಗಳಿಂದ ಸುತ್ತುವರೆದಿದ್ದು, ಜನರಲ್ಲಿ ಭಯ ಆವರಿಸಿದೆ.