ನಟ – ನಟಿಯರು, ಗಣ್ಯರ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿ ಅಸಭ್ಯ ಸಂದೇಶ, ವಿಡಿಯೋ, ಫೋಟೋ ಹಾಕುವ ಸಂಗತಿ ಹೊಸದೇನು ಅಲ್ಲ. ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು, ಇದೀಗ ಖ್ಯಾತ ನಟಿ ಒಬ್ಬರ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದೆ.
ಹೌದು, ತೆಲುಗು ಚಿತ್ರರಂಗದ ಖ್ಯಾತ ನಟಿ ಹಾಗೂ ನಿರೂಪಕಿ ವಿಷ್ಣುಪ್ರಿಯಾ ಭೀಮನೇನಿ ಅವರ ಫೇಸ್ಬುಕ್ ಖಾತೆಯನ್ನು ಈಗ ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದಾರೆ. ಅಲ್ಲದೆ ಅವರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಇಲ್ಲಿ ಲೀಕ್ ಮಾಡಿದ್ದಾರೆ.
ತಮ್ಮ ಖಾತೆ ಹ್ಯಾಕ್ ಆಗಿರುವುದು ತಿಳಿದು ಬರುತ್ತಿದ್ದಂತೆ ವಿಷ್ಣುಪ್ರಿಯಾ, ಖಾತೆಯನ್ನು ಅನ್ ಫಾಲೋ ಮಾಡುವಂತೆ ಅಭಿಮಾನಿಗಳಿಗೆ instagram ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಇದು ಹ್ಯಾಕರ್ ಗಳ ಕೃತ್ಯ ಎಂದು ಸ್ಪಷ್ಟಪಡಿಸಿದ್ದಾರೆ.