alex Certify BIG NEWS: ಖ್ಯಾತ ನಟಿಗೆ ಪತಿಯಿಂದಲೇ ವಂಚನೆ; ಪ್ರಶ್ನಿಸಿದ್ದಕ್ಕೆ ಹಲ್ಲೆ, ಕಿರುಕುಳ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಖ್ಯಾತ ನಟಿಗೆ ಪತಿಯಿಂದಲೇ ವಂಚನೆ; ಪ್ರಶ್ನಿಸಿದ್ದಕ್ಕೆ ಹಲ್ಲೆ, ಕಿರುಕುಳ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಚೆನ್ನೈ: ಖ್ಯಾತ ನಟಿ ದಿವ್ಯಾ ಶ್ರೀಧರ್ ತಮ್ಮ ಪತಿಯ ವಿರುದ್ಧ ಹಲ್ಲೆ ಹಾಗೂ ಕಿರುಕುಳ ಆರೋಪ ಮಾಡಿದ್ದು, ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

2017ರಲ್ಲಿ ಅರ್ನವ್ ಎಂಬ ನಟನೊಂದಿಗೆ ವೈವಾಹಿಕ ಜೀವನಕ್ಕೆ ದಿವ್ಯಾ ಶ್ರೀಧರ್ ಕಾಲಿಟ್ಟಿದ್ದರು. ಮದುವೆಯಾಗಿ ತಾವು ಸಹಜೀವನ ನಡೆಸುತ್ತಿದ್ದರೂ ವಿವಾಹದ ವಿಚಾರವನ್ನು ಎಲ್ಲಿಯೂ ಹೇಳದಂತೆ ಪತಿ ಅರ್ನವ್ ತಾಕೀತು ಮಾಡಿದ್ದ. ಅಲ್ಲದೇ ತಾನೀಗ ಗರ್ಭಿಣಿಯಾಗಿದ್ದು, ತನ್ನ ಹಾಗೂ ಮಗುವಿನ ಜವಾಬ್ದಾರಿ ಪಡೆಯಲೂ ಅರ್ನವ್ ನಿರಾಕರಿಸುತ್ತಿರುವುದಾಗಿ ನಟಿ ದಿವ್ಯಾ ದೂರಿದ್ದಾರೆ.

ಕೆಲ ವರ್ಷಗಳ ಹಿಂದೆ ನಟ ಅರ್ನವ್ ಪರಿಚಯವಾಗಿ ಇಬ್ಬರೂ ಪ್ರೀತಿಸಿ 2017ರಲ್ಲಿ ತಾವು ವಿವಾಹವಾಗಿದ್ದು, ಮನೆ ಕಟ್ಟಲು ಕೂಡ ಅರ್ನವ್ ಗೆ ತಾನು ಆರ್ಥಿಕವಾಗಿ ಸಹಾಯ ಮಾಡಿದ್ದೆ. ವಿವಾಹದ ಬಳಿಕ ಚೆನ್ನೈನಲ್ಲಿ ವಾಸವಾಗಿದ್ದು, ಇದೀಗ ಪತಿ ಅರ್ನವ್ ಬೇರೊಂದು ನಟಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ತನಗೆ ಕಿರುಕುಳ ನೀಡುತ್ತಿರುವುದಾಗಿ ದಿವ್ಯಾ ಶ್ರೀಧರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಟಿ ದಿವ್ಯಾ ಶ್ರೀಧರ್ ಕನ್ನಡ, ತಮಿಳು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದು, ಕನ್ನಡದ ಸೇವಂತಿ, ಮಗರಸಿ ಧಾರಾವಾಹಿ ಹಾಗೂ ಪಲ್ಲಕ್ಕಿ, ವಿಚಿತ್ರ ಪ್ರೇಮಿ, ಸಿನಿಮಾಗಳಿಂದ ಜನಪ್ರಿಯತೆ ಪಡೆದುಕೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...