ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ಶಾಕ್ ಎದುರಾಗುವ ಸಾಧ್ಯತೆ ಇದೆ. ಶೇಕಡ 15ರಷ್ಟು ಶುಲ್ಕ ಹೆಚ್ಚಳಕ್ಕೆ ಆಡಳಿತ ಮಂಡಳಿಗಳು ಮುಂದಾಗಿದ್ದು, 2023 – 24 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರುವ ನಿರೀಕ್ಷೆಯಿದೆ.
ಕೊರೋನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಶೇ.30 ರಷ್ಟು ಶುಲ್ಕವನ್ನು ಇಳಿಕೆ ಮಾಡಿದ್ದು, ಅದಾದ ಬಳಿಕ ಶಾಲಾಡಳಿತ ಮಂಡಳಿಗಳು ಶುಲ್ಕವನ್ನು ಏರಿಸಿಕೊಂಡು ಬಂದಿವೆ. ಇದೀಗ ಮತ್ತೆ ಶೇ.15 ರಷ್ಟು ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಶೇಕಡ 15ಕ್ಕಿಂತ ಅಧಿಕ ಶುಲ್ಕ ಹೆಚ್ಚಿಸಿದರೆ ಅದು ವಾಣಿಜ್ಯೀಕರಣ ಆಗುವುದರಿಂದ ಈ ಮಿತಿಯೊಳಗೆ ಶುಲ್ಕ ಪಡೆಯುವಂತೆ ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ತನ್ನ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.