ಕೀವ್: ಉಕ್ರೇನ್ ನಲ್ಲಿ ರಷ್ಯಾ ನಡೆಸುತ್ತಿರುವ ಸಮರ ಇಂದು 11ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೀಡಾದ ಭಾರತೀಯರ ಏರ್ ಲಿಫ್ಟ್ ಚುರುಕುಗೊಂಡಿದ್ದು, ಆಪರೇಷನ್ ಗಂಗಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದೆ.
ಭಾರತೀಯರ ಏರ್ ಲಿಫ್ಟ್ ಕ್ಲೈಮ್ಯಾಕ್ಸ್ ಹಂತ ತಲುಪಿರುವ ಹಿನ್ನೆಲೆಯಲ್ಲಿ ಭರತೀಯ ರಾಯಭಾರ ಕಚೇರಿ ಉಕ್ರೇನ್ ನಲ್ಲಿರುವ ಭಾರತೀಯರಿಗೆ ಮತ್ತೊಂದು ಮಹತ್ವದ ಸೂಚನೆ ನೀಡಿದೆ. ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರು ಹಂಗೇರಿಗೆ ತೆರಳುವಂತೆ ತಿಳಿಸಿದೆ.
ಭಾರತೀಯರು ಹಂಗೇರಿ ಸಿಟಿ ಸೆಂಟರ್ ಸಂಪರ್ಕಿಸಲು ಹಾಗೂ ತುರ್ತಾಗಿ ಗೂಗಲ್ ಫಾರ್ಮ್ ಭರ್ತಿ ಮಾಡುವಂತೆ ರಾಯಭಾರ ಕಚೇರಿ ಸಂದೇಶ ರವಾನಿಸಿದೆ. ರಾಯಬಾರ ಕಚೇರಿಯಿಂದ ವ್ಯವಸ್ಥೆ ಮಾಡಲಾದ ವಸತಿಗಳನ್ನು ಹೊರತುಪಡಿಸಿ ತಮ್ಮದೇ ಆದ ವಸತಿಗಳಲ್ಲಿ ವಾಸಿಸುವ ವಿದ್ಯಾರ್ಥಿಗಳನ್ನು ಬುಡಾಪೆಸ್ಟ್ ನಲ್ಲಿರುವ ಹಂಗೇರಿ ಸಿಟಿ ಸೆಂಟರ್ ಗೆ ತಲುಪುವಂತೆ ತಿಳಿಸಲಾಗಿದೆ.