ಬೆಂಗಳೂರು: ಬೆಂಗಳೂರಿನ ಕ್ಲಾರೆನ್ಸ್ ಸ್ಕೂಲ್ ನಲ್ಲಿ ಬೈಬಲ್ ಬೋಧನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಾಲಾ ಮಕ್ಕಳಿಗೆ ಬೈಬಲ್ ಓದಿ ಎಂದು ಹೇಳುವುದು ತಪ್ಪು. ಯಾವುದೇ ಶಿಕ್ಷಣ ಸಂಸ್ಥೆ ಇಂಥಹ ಆದೇಶ ನೀಡುವುದು ಸರಿಯಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಯಾವುದೇ ಶಾಲೆಯಲ್ಲಿ ಧಾರ್ಮಿಕ ಗ್ರಂಥಗಳ ಬೋಧನೆ ಸರಿಯಲ್ಲ. ಬೈಬಲ್, ಕುರಾನ್ ಧಾರ್ಮಿಕ ಗ್ರಂಥ ಎಂದು ಪರಿಗಣಿಸಲಾಗಿದೆ. ನೈತಿಕ ಶಿಕ್ಷಣ ಎಂದಾಕ್ಷಣ ಈ ರೀತಿ ಮಾಡುವುದು ಸರಿಯಲ್ಲ. ಇಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಮನೆಯಲ್ಲೇ ಕುಳಿತು ಹಣ ಗಳಿಸಲು ಇಲ್ಲಿದೆ ಟಿಪ್ಸ್
ಕ್ಲಾರೆನ್ಸ್ ಶಾಲೆಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಉತ್ತರಿಸಲು ಶಾಲಾ ಆಡಳಿತ ಮಂಡಳಿಗೆ ಕಾಲಾವಕಾಶ ನೀಡಲಾಗಿದೆ. ಶಾಲೆಗಳು ರಾಜ್ಯದ ಎಜುಕೇಶನ್ ಆಕ್ಟ್ ಅಡಿ ಬರುತ್ತೆ. ರಾಜ್ಯದ ಶಿಕ್ಷಣ ಸಂಸ್ಥೆಗಳು ಈ ರೀತಿ ಮಾಡಲು ಅವಕಾಶವಿಲ್ಲ. ಬೈಬಲ್, ಕುರಾನ್ ಗ್ರಂಥಗಳು ಪಠ್ಯಗಳಲ್ಲ, ಧರ್ಮದ ಪುಸ್ತಕ ಮಕ್ಕಳಿಗೆ ಬೈಬಲ್ ಓದಿ ಎಂದು ಶಾಲೆಗಳಲ್ಲಿ ಹೇಳಲಾಗದು. ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟಿಪ್ಪು, ಭಗವದ್ಗೀತೆ ವಿಚಾರ ಬಂದಾಗ ಮಾತನಾಡುವ ವಿಪಕ್ಷ ನಾಯಕರು ಈಗ್ಯಾಕೆ ಮಾತನಾಡುತ್ತಿಲ್ಲ. ಸೋಕಾಲ್ಡ್ ಬುದ್ಧಿ ಜೀವಿಗಳು, ರಾಜಕೀಯ ನಾಯಕರು ಈಗ ಸುಮ್ಮನಿರುವುದು ಯಾಕೆ ? ಶಾಲೆ ಮಾಡುತ್ತಿರುವುದು ತಪ್ಪು ಎಂದು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.