ಮಂಗಳೂರು: ತಮಗೆ ಕೊರೊನಾ ಸೋಂಕು ತಗುಲಿದೆ ಎಂಬ ಭಯದಲ್ಲಿ ದಂಪತಿ ಆತ್ಮಹತೆಗೆ ಶರಣಾಗಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ದಂಪತಿಯಲ್ಲಿ ಸೋಂಕು ಇರಲಿಲ್ಲ ಎಂದು ತಿಳಿದುಬಂದಿದೆ.
ಮಂಗಳೂರಿನ ಹೊರವಲಯದ ಚಿತ್ರಾಪುರದ ಅಪಾರ್ಟ್ ಮೆಂಟ್ ಒಂದರಲ್ಲಿ ರಮೇಶ್ ಸುವರ್ಣ ಹಾಗೂ ಗುಣ ದಂಪತಿ ಆತ್ಮಹತ್ಯೆಗೆ ಶರಣಾಗಿದರು. ಆತ್ಮಹತ್ಯೆಗೂ ಮುನ್ನ ಮಂಗಳೂರು ಪೊಲೀಸ್ ಆಯುಕ್ತರಿಗೆ ವಾಯ್ಸ್ ಮೆಸೇಜ್ ಮಾಡಿ, ತಾವು ಕಳೆದ ಒಂದು ವಾರದಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಬ್ಲ್ಯಾಕ್ ಫಂಗಸ್ ಬಂದರೂ ಬರಬಹುದು ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಕರೆ ಕಟ್ ಮಾಡಿದ್ದರು. ಕರೆ ಬಂದ ಅಡ್ರೆಸ್ ಟ್ರಾಕ್ ಮಾಡಿ ಪೊಲೀಸರು ಮನೆಗೆ ಧಾವಿಸುವಷ್ಟರಲ್ಲಿ ಪತಿ ಹಾಗೂ ಪತ್ನಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದರು.
ದೇಶ ಕಾಯುವ ಯೋಧರಿಗಾಗಿ ರಾಖಿ ತಯಾರಿಸಿದ ಮಹಿಳೆಯರು
ಇದೀಗ ಮೃತ ದಂಪತಿಗಳ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಇಬ್ಬರಲ್ಲೂ ಕೋವಿಡ್ ನೆಗೆಟಿವ್ ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಪತಿ-ಪತ್ನಿ ಇಬ್ಬರಿಗೂ ಕೊರೊನಾ ಸೋಂಕು ಹರಡಿರಲಿಲ್ಲ, ತಮ್ಮಷ್ಟಕ್ಕೇ ತಾವೇ ನಿರ್ಧರಿಸಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಅಲ್ಲದೇ ದಂಪತಿಗಳು ಎರಡು ಬಾರಿ ಮಗು ಪಡೆಯಲು ಯತ್ನಿಸಿ ವಿಫಲರಾಗಿದ್ದರು. ಈ ಖಿನ್ನತೆ ಕೂಡ ಅವರನ್ನು ಕಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.