alex Certify BIG NEWS: ಕೋವಿಡ್ ಬಾಧಿತ ವಲಯಕ್ಕೆ ವಿಶೇಷ ಪ್ಯಾಕೇಜ್; 8 ಆರ್ಥಿಕ ನೆರವು ಘೋಷಿಸಿದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್ ಬಾಧಿತ ವಲಯಕ್ಕೆ ವಿಶೇಷ ಪ್ಯಾಕೇಜ್; 8 ಆರ್ಥಿಕ ನೆರವು ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ಸಂಕಷ್ಟದಿಂದ ತತ್ತರಿಸಿರುವ ಕ್ಷೇತ್ರಗಳಿಗೆ ವಿಶೇಷ ಆರ್ಥಿಕ ನೆರವು ಘೋಷಿಸಿರುವ ಕೇಂದ್ರ ಸರ್ಕಾರ ಕೊರೊನಾ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ತುರ್ತು ಅನುದಾನ ಘೋಷಣೆ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 8 ಘೋಷಣೆಗಳಲ್ಲಿ 4 ಹೊಸ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದರು. ಕೊರೊನಾ ಬಾದಿತ ವಲಯಕ್ಕೆ 1.1ಲಕ್ಷ ಕೋಟಿ ರೂ. ಘೋಷಿಸಲಾಗಿದೆ. ವೈದ್ಯಕೀಯ ಮೂಲಸೌಕರ್ಯಕ್ಕೆ 50 ಸಾವಿರ ಕೋಟಿ ಹಾಗೂ ಉಳಿದ ವಲಯಗಳಿಗೆ 60 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಕಳೆದ ವರ್ಷ ಘೋಷಿಸಿದ್ದ ತುರ್ತು ಕ್ರೆಡಿಟ್ ಲಿಂಕಿಂಗ್ ಸ್ಕೀಮ್ ಗೆ 1.5 ಲಕ್ಷ ಕೋಟಿ ಹೆಚ್ಚುವರಿ ಘೋಷಣೆ ಮೂಲಕ ಒಟ್ಟು 4.5 ಲಕ್ಷ ಕೋಟಿ ಅನುದಾನ ಘೋಷಿಸಲಾಗಿದೆ. ಶೇ.7.95ರ ಬಡ್ಡಿದರದಲ್ಲಿ 8 ಮಹಾನಗರ ಹೊರತುಪಡಿಸಿ ಉಳಿದೆಡೆ ಆರೋಗ್ಯ ಸೌಕರ್ಯಕ್ಕೆ ಸಾಲ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.

25 ಲಕ್ಷ ಜನರಿಗೆ ಮೈಕ್ರೋ ಫೈನಾನ್ಸ್ ಮೂಲಕ ಸಾಲ. ಸಾಲ ಮರುಪಾವತಿಗೆ 3 ವರ್ಷ ಅವಕಾಶ

ಬ್ಯಾಂಕೇತರ ಸಂಸ್ಥೆ ಮೂಲಕಕ ತಲಾ 1.25 ಲಕ್ಷದವರೆಗೂ ಸಾಲ ಒದಗಿಸಲು ನಿರ್ಧಾರ

ಎಂಸಿಎಲ್ಆರ್ ಜೊತೆ ಶೇ.2ರಷ್ಟು ಬಡ್ದಿದರದಲ್ಲಿ ಹೆಚ್ಚುವರಿ ಸಾಲ

5,00,000 ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ

ನೋಂದಾಯಿತ ಟೂರಿಸ್ಟ್ ಗೈಡ್ ಗಳಿಗೂ ನೆರವು ನೀಡಲಾಗುತ್ತಿದ್ದು, 1 ಲಕ್ಷದವರೆಗೆ ಸಾಲ

ಟೂರಿಸ್ಟ್ ಏಜನ್ಸಿಗಳಿಗೆ 10 ಲಕ್ಷದವರೆಗೆ ಸಾಲ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...