ನವದೆಹಲಿ: ಕೊರೊನಾ ಸೋಂಕಿನಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಫಂಗಲ್ ಇನ್ ಫೆಕ್ಷನ್ ಆಗಿದೆ ಎಂದು ತಿಳಿದುಬಂದಿದೆ.
ಕೋವಿಡ್ ನಿಂದ ಬಳಲುತ್ತಿದ್ದ ಸೋನಿಯಾ ಗಾಂಧಿ ಜೂನ್ 12ರಂದು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ. ಆದರೆ ಇದೀಗ ಅವರಲ್ಲಿ ಪೋಸ್ಟ್ ಕೋವಿಡ್ ಲಕ್ಷಣಗಳು ಕಂಡುಬಂದಿವೆ.
ವೈದ್ಯರ ತಪಾಸಣೆ ವೇಳೆ ರೆಸ್ಪಿರೇಟರಿ ಸಿಸ್ಟಮ್ ನಲ್ಲಿ ಫಂಗಲ್ ಇನ್ ಫೆಕ್ಷನ್ ಪತ್ತೆಯಾಗಿದ್ದು, ಇದೀಗ ಇನ್ ಫೆಕ್ಷನ್ ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಸೋನಿಯಾ ಗಾಂಧಿ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಪೋಸ್ಟ್ ಕೋವಿಡ್ ಗೆ ಸಂಬಂಧಿಸಿದ ಚಿಕಿತ್ಸೆ ನೀಡಲಾಗುತ್ತಿದೆ.