ಬೆಂಗಳೂರು: ಜುಲೈ 5ರಿಂದ ಅನ್ ಲಾಕ್-3.0 ಜಾರಿ ಬಹುತೇಕ ಖಚಿತವಾಗಿದ್ದು, ಕೋವಿಡ್ ನಿಯಂತ್ರಣಕ್ಕಾಗಿ 54 ತಂಡಗಳ ರಚನೆ ಮಾಡಲಾಗಿದೆ. ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರದಿಂದ ಅನ್ ಲಾಕ್ ಗೆ ಸಿದ್ಧತೆ ನಡೆಸಲಾಗಿದ್ದು, ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಈ ಹುಡುಗಿಗಿದೆ ಎರಡು ಖಾಸಗಿ ಅಂಗ, ಎರಡು ಗರ್ಭಾಶಯ..!
ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆದಿದ್ದು, ಅನ್ ಲಾಕ್ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಸಭೆ ಬಳಿಕ ಮಾತನಾಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಕೊರೊನಾ ನಿಯಂತ್ರಣ ಕೆಲಸಕ್ಕೆ 54 ತಂಡ ರಚಿಸಲಾಗಿದ್ದು, ಇದರಲ್ಲಿ ಪ್ರತಿ ತಂಡದಲ್ಲಿ 4 ಬಿಬಿಎಂಪಿ ಮಾರ್ಷಲ್ ಗಳು ಇರುತ್ತಾರೆ. ಪೊಲೀಸರು ಹಾಗೂ ಮಾರ್ಷಲ್ ಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕ್ಯಾಮರಾದಲ್ಲಿ ಸೆರೆಯಾದ ದೆವ್ವ ಹೇಳಿದ್ದೇನು….?
ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಹಾಕಲು ಹೋಂ ಗಾರ್ಡ್ ಗಳನ್ನು ಬಳಸಿಕೊಳ್ಳಲಾಗುವುದು. ಫುಟ್ ಪಾತ್ ಮೇಲಿನ ಅಂಗಡಿ ತೆರವುಗೊಳಿಸಲಾಗುವುದು. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ನಿಯಮ ಮೀರಿದರೆ ಅಂತಹ ಅಂಗಡಿ, ಹೋಟೇಲ್ ಗಳ ವಿರುದ್ಧ ಕ್ರಮ ಕೈಗೊಂಡು ಬೀಗ ಹಾಕಲಾಗುವುದು. ಸಾರ್ವಜನಿಕರು ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ನಿಯಮಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ.