ದಾವಣಗೆರೆ: ಕೊರೊನಾ ಸೋಂಕು ಓಡಿಸಲೆಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಕೋವಿಡ್ ಕೇರ್ ಸಂಟರ್ ನಲ್ಲೇ ಹೋಮ-ಹವನ ಮಾಡಿಸುವ ಮೂಲಕ ಸುದ್ದಿಯಾಗಿದ್ದಾರೆ.
ಪೆಟ್ರೋಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಪ್ರಧಾನಿ ಮೋದಿ ತಿಗಣೆಯಂತೆ ಜನರ ರಕ್ತ ಹೀರುತ್ತಿದ್ದಾರೆ; ಸಿದ್ದರಾಮಯ್ಯ ಆಕ್ರೋಶ
ಇತ್ತೀಚಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಕೊರೊನಾ ಸೋಂಕಿತರಿಗೆ ಆರ್ಥಿಕ ನೆರವು ನೀಡಿ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ರೋಗಿಗಳಿಗೆ ಶೀಘ್ರ ಚೇತರಿಕೆಗಾಗಿ ಡ್ಯಾನ್ಸ್, ಹಾಡು, ಯೋಗ ಸೇರಿದಂತೆ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರು ಸೋಂಕಿನ ವಿರುದ್ಧ ಹೋರಾಡಲು ಮಾನಸಿಕ ಧೈರ್ಯ ತುಂಬಿ ಗಮನ ಸೆಳೆದಿದ್ದ ರೇಣುಕಾಚಾರ್ಯ ಇದೀಗ ಕೋವಿಡ್ ಕೇರ್ ಸೆಂಟರ್ ನಲ್ಲಿ ಹೋಮ ಮಾಡಿಸುವ ಮೂಲಕ ಸುದ್ದಿಯಾಗಿದ್ದಾರೆ.
ಕೊರೊನಾ ಲಸಿಕೆ ಅಭಿಯಾನಕ್ಕೆ ಚುರುಕು ಮುಟ್ಟಿಸಲು ಪೊಲೀಸರ ವಿಶೇಷ ಪ್ರಯತ್ನ
ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಮೃತ್ಯುಂಜಯ ಹೋಮ, ಧನ್ವಂತರಿ ಹೋಮ ಮಾಡಿಸಿದ್ದು, ಹೋಮದಲ್ಲಿ ಸ್ವತಃ ರೇಣುಕಾಚಾರ್ಯ ಹಾಗೂ ಪತ್ನಿ ಸುಮಾ ಭಾಗಿಯಾಗಿದ್ದಾರೆ. ಕೊರೊನಾ ಸೋಂಕು ತೊಲಗಿ ಸೋಂಕಿತರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.