ಭಾರತ್ ಬಯೋಟೆಕ್ ಕಂಪನಿ ಕೋವಿಡ್ ಲಸಿಕೆಯಾದ ಕೋವಾಕ್ಸಿನ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಧಾನಗೊಳಿಸಿದೆ. ಈಗಾಗ್ಲೇ ವ್ಯಾಕ್ಸಿನ್ ಸಂಗ್ರಹಿಸಿಡುವ ಏಜೆನ್ಸಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕೋವ್ಯಾಕ್ಸಿನ್ ಪೂರೈಸಲಾಗಿದೆ. ವ್ಯಾಕ್ಸಿನ್ ಗೆ ಬೇಡಿಕೆ ಕೂಡ ಕಡಿಮೆಯಾಗಿರೋದ್ರಿಂದ ಉತ್ಪಾದನೆಯನ್ನು ಇಳಿಕೆ ಮಾಡ್ತಿರೋದಾಗಿ ಭಾರತ್ ಬಯೋಟೆಕ್ ತಿಳಿಸಿದೆ.
ಸದ್ಯ ಬಾಕಿ ಇರುವ ಸೌಲಭ್ಯ ನಿರ್ವಹಣೆಯ ಬಗ್ಗೆ ಹೆಚ್ಚಿನ ಗಮನ ಹರಿಸುವುದಾಗಿ ವ್ಯಾಕ್ಸಿನ್ ತಯಾರಕ ಕಂಪನಿ ಸ್ಪಷ್ಟಪಡಿಸಿದೆ. ಕಳೆದ ವರ್ಷ ಕೋವ್ಯಾಕ್ಸಿನ್ ಅನ್ನು ನಿರಂತರವಾಗಿ ಉತ್ಪಾದನೆ ಮಾಡಲಾಗಿದೆ. ಇನ್ಮುಂದೆ ಅಸ್ತಿತ್ವದಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಕೋವಿಡ್ ಗೆ ಸಂಬಂಧಿಸಿದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಬಳಸಿಕೊಳ್ಳುವ ಸಲುವಾಗಿ ಮೀಸಲಿಡುತ್ತೇವೆ ಎಂದು ಕಂಪನಿ ತಿಳಿಸಿದೆ.
ಕೋವಾಕ್ಸಿನ್ನ ಗುಣಮಟ್ಟದಲ್ಲಿ ಯಾವುದೇ ಸಮಯದಲ್ಲೂ ರಾಜಿ ಮಾಡಿಕೊಂಡಿಲ್ಲ ಅಂತಾ ಭಾರತ್ ಬಯೋಟೆಕ್ ಸ್ಪಷ್ಟನೆಯನ್ನೂ ನೀಡಿದೆ. ಕೋವ್ಯಾಕ್ಸಿನ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ ಅಂತಾ ಇತ್ತೀಚೆಗಷ್ಟೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿತ್ತು. ಈ ಬಗ್ಗೆ ಕೂಡ ಭಾರತ್ ಬಯೋಟೆಕ್ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ.