alex Certify BIG NEWS: ಕೋವಿಡ್‌ ನಿಂದಾದ ನಷ್ಟದಿಂದ ಇನ್ನೂ ಚೇತರಿಸಿಕೊಂಡಿಲ್ಲ ಶೇ.80ರಷ್ಟು ಭಾರತೀಯರು…! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್‌ ನಿಂದಾದ ನಷ್ಟದಿಂದ ಇನ್ನೂ ಚೇತರಿಸಿಕೊಂಡಿಲ್ಲ ಶೇ.80ರಷ್ಟು ಭಾರತೀಯರು…! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಶೋಧನೆಯ ಅಂಕಿಅಂಶಗಳ ಪ್ರಕಾರ ಜನಸಂಖ್ಯೆಯ ಕೇವಲ ಶೇ.20ರಷ್ಟು ಜನರು ಮಾತ್ರ ವಿವೇಚನಾಯುಕ್ತ ಖರ್ಚು ವೆಚ್ಚ ಮಾಡುತ್ತಿದ್ದಾರೆ. ಉಳಿದವರು ಕೊರೊನಾಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗವು ಭಾರತದ ಶ್ರೀಮಂತ ಗ್ರಾಹಕರ ಆದಾಯದ ಮಟ್ಟದ ಮೇಲೆ ಪರಿಣಾಮ ಬೀರಿಲ್ಲ. ಹಾಗಾಗಿಯೇ ಶೇ.20ರಷ್ಟು ಮಂದಿ ವಿವೇಚನಾಯುಕ್ತ ಬಳಕೆಗೆ ಸೈ ಎಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.59ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇ.66ರಷ್ಟು ಜನರು ಕೋವಿಡ್‌ನಿಂದಾದ ನಷ್ಟದಿಂದ ಇನ್ನೂ ಚೇತರಿಸಿಕೊಂಡಿಲ್ಲ.

ಆಂತರಿಕ ಯುಬಿಎಸ್ ಸಮೀಕ್ಷೆ ಫಲಿತಾಂಶಗಳನ್ನು ಗಮನಿಸಿದ್ರೆ, ಪ್ರತಿಕ್ರಿಯಿಸಿದ ಸುಮಾರು 1500 ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ  ಯೋಜಿಸಿದಂತೆ ಅಥವಾ ಕಳೆದ ಮೂರು ತಿಂಗಳಲ್ಲಿ ಹೆಚ್ಚು ಚಿನ್ನ ಮತ್ತು ಆಭರಣಗಳನ್ನು ಖರೀದಿಸಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಮುಂದಿನ 2 ವರ್ಷಗಳಿಗಾಗಿ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಯೋಜಿಸಿದ್ದಾರೆ. ಕಾರು, ದ್ವಿಚಕ್ರ ವಾಹನಗಳನ್ನು ಖರೀದಿಸಿದ್ದಾರೆ.UBS ಸಮೀಕ್ಷೆಯ ಫಲಿತಾಂಶಗಳಿಂದ ಶ್ರೀಮಂತರು ಬಳಕೆಯ ಬೇಡಿಕೆಯನ್ನು ಮುಂದುವರೆಸುತ್ತಾರೆ ಎಂಬುದು ಸ್ಪಷ್ಟವಾಗಿದೆ.

ಶೇ.70 ಕ್ಕಿಂತ ಹೆಚ್ಚು ಜನರು 2023ರಲ್ಲಿ ಹೆಚ್ಚಿನ ಆದಾಯವನ್ನು ನಿರೀಕ್ಷಿಸುತ್ತಾರೆ. ಹಾಗೆಯೇ ಹಬ್ಬದ ಖರ್ಚು ಹೆಚ್ಚಾಗಬಹುದು ಎಂಬ ಆತಂಕ ಹೊರಹಾಕಿದ್ದಾರೆ. ಆದರೆ ಶೇ.20ರಷ್ಟು ಜನರು ಆನ್‌ಲೈನ್ ಶಾಪಿಂಗ್, ಆರೋಗ್ಯ, ಆನ್‌ಲೈನ್ ಮನರಂಜನೆ, ದಿನಸಿ, ಆಹಾರ ಮುಂತಾದ ಗೃಹೋಪಯೋಗಿ ವಸ್ತುಗಳ ಮೇಲೆ ಸ್ಥಿರವಾದ ಖರ್ಚು ಮುಂದುವರಿಸಿದ್ದಾರೆ. ಬಾಳಿಕೆ ಬರುವ ವಸ್ತುಗಳು ಮತ್ತು ಶಿಕ್ಷಣದ ಮೇಲಿನ ಖರ್ಚು ಬಹುತೇಕ ಒಂದೇ ಆಗಿರುತ್ತದೆ. ಶೇ.9 ರಷ್ಟು ಜನರು ಮಾತ್ರ ತಮ್ಮ ಹಬ್ಬದ ವೆಚ್ಚದಲ್ಲಿ ನಿಧಾನಗತಿಯನ್ನು ನಿರೀಕ್ಷಿಸುತ್ತಾರೆ.

ಪ್ರತಿಕ್ರಿಯೆ ನೀಡಿದವರ ಪೈಕಿ ಶೇ.55ರಷ್ಟು ಮಂದಿ ಮುಂದಿನ ಎರಡು ವರ್ಷಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನವನ್ನು ಖರೀದಿಸಲು ಬಯಸುತ್ತಾರೆ. ಶೇ.50ರಷ್ಟು ಜನರು ಮುಂದಿನ ಎರಡು ವರ್ಷಗಳಲ್ಲಿ ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದಾರೆ. ವಿಶ್ಲೇಷಣೆಯ ಪ್ರಕಾರ ಕೋವಿಡ್‌ ಸಮಯದಲ್ಲಿ, ಔಪಚಾರಿಕ ವಲಯವು ಅನೌಪಚಾರಿಕ ಆರ್ಥಿಕತೆಯ ವೆಚ್ಚದಲ್ಲಿ ಮಾರುಕಟ್ಟೆ ಪಾಲನ್ನು ಗಳಿಸಿತು.

ಏಕೆಂದರೆ ಶ್ರೀಮಂತರು ಆನ್‌ಲೈನ್ ಶಾಪಿಂಗ್, ಆರೋಗ್ಯ, ಆನ್‌ಲೈನ್ ಮನರಂಜನೆ ಮತ್ತು ದಿನಸಿ, ಆಹಾರದಂತಹ ಗೃಹಬಳಕೆಯ ವಸ್ತುಗಳ ಮೂಲಕ ಬ್ರಾಂಡ್ ಸರಕುಗಳ ಮೇಲೆ ತಮ್ಮ ಖರ್ಚುಗಳನ್ನು ಹೆಚ್ಚಿಸುವುದನ್ನು ಮುಂದುವರೆಸಿದರು. ವಯಸ್ಸಿನ ಗುಂಪುಗಳಾದ್ಯಂತ ಆದಾಯದ ನಿರೀಕ್ಷೆಗಳು ಭಿನ್ನವಾಗಿರುತ್ತವೆ.  ಪ್ರತಿಕ್ರಿಯಿಸಿದವರಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಜನರು ಸ್ಥಿರ ಅಥವಾ ಹೆಚ್ಚುತ್ತಿರುವ ಆದಾಯದ ಮಟ್ಟವನ್ನು ಗುರುತಿಸಿದ್ದಾರೆ. ಕೇವಲ 23 ಪ್ರತಿಶತದಷ್ಟು ಜನರು ಆದಾಯದಲ್ಲಿ ಕುಸಿತವನ್ನು ಕಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...