ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಶಾರುಖ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ವರ್ಷದ ಐಪಿಎಲ್ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನ ನಾಯಕನಾಗಿ ಆಯ್ಕೆ ಮಾಡಿದೆ. ಈ ಬಗ್ಗೆ ತಂಡದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿ ತಂಡವನ್ನು ಮುನ್ನಡೆಸಲಿರುವ ನಾಯಕನ ಬಗ್ಗೆ ಮಾಹಿತಿ ನೀಡಿದೆ.
ಈ ಮೂಲಕ ದೆಹಲಿ ತಂಡದ ಮಾಜಿ ಆಟಗಾರ ಶ್ರೇಯಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರನೇ ನಾಯಕನಾಗಿದ್ದಾರೆ. ಕೆಕೆಆರ್ ನ ಈ ಹಿಂದಿನ ನಾಯಕ ದಿನೇಶ್ ಕಾರ್ತಿಕ್ ಅವ್ರನ್ನ ರಿಟೇನ್ ಮಾಡದ ತಂಡ ಶ್ರೇಯಸ್ ಅವರನ್ನು 12.25 ಕೋಟಿಗೆ ಖರೀದಿಸಿದೆ. ಇದು ಈ ವರ್ಷದ ಮೆಗಾ ಹರಾಜಿನ ಅತಿದೊಡ್ಡ ಮೊತ್ತಗಳಲ್ಲಿ ಒಂದು.
ಪರೀಕ್ಷೆಯಲ್ಲಿ ‘ಯಶಸ್ಸು’ ಗಳಿಸಲು ಅನುಸರಿಸಿ ಈ ಸೂತ್ರ
ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅವರನ್ನು ಯಶಸ್ವಿಯಾಗಿ ಬಿಡ್ ಮಾಡಿದ್ದೇವೆ. ಕೆಕೆಆರ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ಶ್ರೇಯಸ್ ಅವರಿಗೆ ನೀಡಲು ನಾವು ಸಂತೋಷಪಡುತ್ತೇವೆ. ಅವರು ಈಗಾಗಲೇ ಒಬ್ಬ ಒಳ್ಳೆಯ ಗುಣಮಟ್ಟದ ಬ್ಯಾಟ್ಸ್‌ಮನ್ ಆಗಿ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಅವರು ತಂಡದ ನಾಯಕರಾಗಿ ಮಿಂಚುತ್ತಾರೆ ಎಂಬ ವಿಶ್ವಾಸ ನಮಗಿದೆ, ಎಂದು ಕೆಕೆಆರ್ ತಂಡದ ಸಿಇಒ ಮತ್ತು ಎಂಡಿ ವೆಂಕಿ ಮೈಸೂರು ಅವರು ಟ್ವೀಟ್ ಮಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಕೆಆರ್‌ನ ನಾಯಕತ್ವವನ್ನು ಸ್ವೀಕರಿಸಿದ ಶ್ರೇಯಸ್ ಅಯ್ಯರ್ ಮಾತನಾಡಿ, ಕೆಕೆಆರ್ ನಂತಹ ಪ್ರತಿಷ್ಠಿತ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆದಿರುವುದು ನನಗೆ ಸಿಕ್ಕಿರುವ ಅತಿದೊಡ್ಡ ಗೌರವ. ಇಷ್ಟು ದೊಡ್ಡ ತಂಡದ ನಾಯಕನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಪ್ರತಿಭಾವಂತ ವ್ಯಕ್ತಿಗಳ ಈ ಶ್ರೇಷ್ಠ ತಂಡವನ್ನು ಮುನ್ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದರು.