ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಬಯಾಲಜಿಕಲ್ ಇ ಕಂಪನಿಯ ಕೊರ್ಬೆವ್ಯಾಕ್ಸ್ ನೀಡಲು ಕೇಂದ್ರ ಆರೋಗ್ಯ ಇಲಾಖೆ ಅನುಮತಿ ನೀಡಿದೆ.
18 ವರ್ಷ ಮೇಲ್ಪಟ್ಟವರಿಗೆ ಮೊದಲ ಎರಡು ಲಸಿಕೆ ಪಡೆದವರು ಬೂಸ್ಟರ್ ಡೋಸ್ ಆಗಿ ಕೊರ್ಬೆವ್ಯಾಕ್ಸ್ ತೆಗೆದುಕೊಳ್ಳಬಹುದಾಗಿದೆ. ಈ ಮೂಲಕ ಮೊದಲ ಎರಡು ಡೋಸ್ ಪಡೆದುಕೊಂಡ ಕಂಪನಿ ಹೊರತಾದ ಮತ್ತೊಂದು ಕಂಪನಿಯ ಬೂಸ್ಟರ್ ಡೋಸ್ ನೀಡಲು ಅವಕಾಶ ನೀಡಿರುವುದು ಭಾರತದಲ್ಲಿ ಇದೇ ಮೊದಲು.
ರಾಷ್ಟ್ರೀಯ ತಾಂತ್ರಿಕ ಲಸಿಕಾಕರಣ ಸಲಹಾ ಮಂಡಳಿ ಕೊರ್ಬೆವ್ಯಾಕ್ಸ್ ತೆಗೆದುಕೊಳ್ಳಲು ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಅನುಮತಿ ನೀಡಿದೆ.