ಬೆಂಗಳೂರು: ದೇಶಾದ್ಯಂತ ಮತ್ತೆ ಕೋವಿಡ್ ಕೇಸ್ ಹೆಚ್ಚುತ್ತಿದ್ದು, 4ನೇ ಅಲೆ ಭೀತಿ ಆರಂಭವಾಗಿದೆ. ಈ ನಿಟ್ಟಿನಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತೆ ಟಫ್ ರೂಲ್ಸ್ ಮೊರೆ ಹೋಗಲಿದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿದ್ದು, ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಧ್ಯಕ್ಕೆ ಕಠಿಣ ನಿಯಮ ಜಾರಿ ಇಲ್ಲ ಎಂದು ಹೇಳಿದ್ದಾರೆ.
BIG NEWS: PSI ನೇಮಕಾತಿ ಅಕ್ರಮದಲ್ಲಿ ಮೊದಲ ತಲೆದಂಡ; ನೇಮಕಾತಿ ವಿಭಾಗದ ADGP ಅಮೃತ್ ಪೌಲ್ ಎತ್ತಂಗಡಿ
ರಾಜ್ಯದಲ್ಲಿ ಸಧ್ಯಕ್ಕೆ ಟಫ್ ರೂಲ್ಸ್ ಜಾರಿ ಇಲ್ಲ. ಅನವಶ್ಯಕವಾಗಿ ಯಾವುದೇ ನಿರ್ಬಂಧ ಹೇರಿಕೆ ಬೇಡ. ಅಗತ್ಯವಿದ್ದಲ್ಲಿ ಮಾತ್ರ ನಿರ್ಬಂಧ ಹೇರಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಶಾಲೆಗಳಲ್ಲಿಯೂ ಲಸಿಕೆ ಅಭಿಯಾನ ಆರಂಭಿಸಲಾಗುವುದು. ಜನರು ಹೆಚ್ಚು ಜಾಗೃತೆ ವಹಿಸಿ ಲಸಿಕೆ ಪಡೆದುಕೊಳ್ಳಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.
ಟೆಸ್ಟ್-ಟ್ರೀಟ್-ಟ್ರ್ಯಾಕ್, ಲಸಿಕೆ ಅನುಸರಿಸಬೇಕು. ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯ. ಏರ್ ಪೋರ್ಟ್ ಗಳಲ್ಲಿ ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚಿಸಿದ್ದಾಗಿ ಹೇಳಿದರು.