alex Certify BIG NEWS: ಕೊರೊನಾ 3ನೇ ಲಸಿಕೆ ಪಡೆಯಲು ಹಿಂದೇಟು; 9 ತಿಂಗಳುಗಳೇ ಕಳೆದ್ರೂ ವ್ಯಾಕ್ಸಿನ್‌ ಪಡೆಯುತ್ತಿಲ್ಲ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ 3ನೇ ಲಸಿಕೆ ಪಡೆಯಲು ಹಿಂದೇಟು; 9 ತಿಂಗಳುಗಳೇ ಕಳೆದ್ರೂ ವ್ಯಾಕ್ಸಿನ್‌ ಪಡೆಯುತ್ತಿಲ್ಲ ಜನ

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗಿವೆ. ಪರಿಣಾಮ ಜನರು ಕೊರೊನಾ 3ನೇ ಲಸಿಕೆ ಪಡೆಯಲು ನಿರುತ್ಸಾಹ ತೋರಿಸ್ತಿದ್ದಾರೆ. ಈ ವರ್ಷದ ಜನವರಿಯಲ್ಲೇ 3 ಡೋಸ್‌ ಅನ್ನು ಪ್ರಕಟಿಸಲಾಗಿತ್ತು. ಆದ್ರೆ ಭಾರತದಲ್ಲಿ ಈವರೆಗೆ ಕೇವಲ ಶೇ.22.24ರಷ್ಟು ವಯಸ್ಕರು ಮೂರನೇ ಡೋಸ್ ಪಡೆದಿದ್ದಾರೆ.

ಜುಲೈನಲ್ಲಿ ಎಲ್ಲಾ ವಯಸ್ಕರಿಗೆ ಉಚಿತ ಲಸಿಕೆ ನೀಡುವಿಕೆಯಲ್ಲಿ ಏರಿಕೆ ಕಂಡು ಬಂದಿತ್ತು. ಆದ್ರೆ ಒಟ್ಟಾರೆ ಅಂಕಿ ಅಂಶ ಇನ್ನೂ ಸುಧಾರಿಸಿಲ್ಲ. ದೇಶದಲ್ಲಿ ಅರ್ಹ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಜನರು ಮೂರನೇ ಡೋಸ್ ಅನ್ನು ತೆಗೆದುಕೊಂಡಿದ್ದಾರೆ. 18-59 ವರ್ಷ ವಯಸ್ಸಿನವರಿಗೆ 75 ದಿನಗಳ ಕಾಲ ಮೂರನೇ ಲಸಿಕೆ ಹಾಕುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದು ಸೆಪ್ಟೆಂಬರ್ 30 ರಂದು ಕೊನೆಗೊಳ್ಳಲಿದೆ.

ಆರೋಗ್ಯ ಸಚಿವಾಲಯದ ಡೇಟಾ ಪ್ರಕಾರ 18-59 ವರ್ಷ ವಯಸ್ಸಿನ 13.53 ಕೋಟಿ ಜನರು ಮೂರನೇ ಡೋಸ್ ಅನ್ನು ಸ್ವೀಕರಿಸಿದ್ದಾರೆ. ಈ ಪ್ರಮಾಣ ಕೇವಲ ಶೇ.17.58ರಷ್ಟಿದೆ. 60 ವರ್ಷಕ್ಕೂ ಮೇಲ್ಪಟ್ಟವರಲ್ಲಿ ಶೇ. 48.5ರಷ್ಟು ಮಂದಿ ಮೂರನೇ ವ್ಯಾಕ್ಸಿನ್‌ ಪಡೆದಿದ್ದಾರೆ. ಈ ವರ್ಗದಲ್ಲಿ 6.66 ಕೋಟಿ ಜನರಿಗೆ ಮೂರನೇ ಡೋಸ್‌ನ ಚುಚ್ಚುಮದ್ದು ನೀಡಲಾಗಿದೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು, ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವಾರು ಆರೋಗ್ಯ ಘಟಕಗಳು ಆರಂಭಿಕ ಲಸಿಕೆ ಸರಣಿಗೆ ಜನರ ಪ್ರತಿಕ್ರಿಯೆಯನ್ನು ಸುಧಾರಿಸಲು ಬೂಸ್ಟರ್ ಡೋಸ್‌ ಕೊಡುವಂತೆ ಶಿಫಾರಸು ಮಾಡಿದೆ.

ಓಮಿಕ್ರಾನ್‌ ಸೇರಿದಂತೆ ಅನೇಕ ರೂಪಾಂತರಿಗಳ ವಿರುದ್ಧ ಹೋರಾಡಲು ಮೂರನೇ ಡೋಸ್‌ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿವೆ. ಆದರೂ ಜನರು ಮಾತ್ರ ಮೂರನೇ ಬಾರಿ ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ತಜ್ಞರ ಪ್ರಕಾರ ಮೂರನೇ ಡೋಸ್ ಕವರೇಜ್ ಕಡಿಮೆಯಾಗಲು ಎರಡು ಪ್ರಮುಖ ಕಾರಣಗಳಿವೆ – ಒಂದು, ಇತ್ತೀಚಿನ ದಿನಗಳಲ್ಲಿ ಕೋವಿಡ್ -19 ಸೋಂಕಿನ ಸಂಖ್ಯೆಯಲ್ಲಿ ಸ್ಥಿರವಾದ ಕುಸಿತ ಮತ್ತು ಎರಡನೆಯದು ಪ್ರಯಾಣ ಅಥವಾ ಇತರ ದಾಖಲೆಗಳಿಗೆ ಮೂರನೇ ಡೋಸ್ ಕಡ್ಡಾಯವಿಲ್ಲದಿರುವುದು.

ಕೊರೊನಾದಿಂದ ತೀವ್ರವಾಗಿ ಪ್ರಭಾವಿತವಾಗಿದ್ದ ಎರಡು ರಾಜ್ಯಗಳಾದ  ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಜನರು ಮೂರನೇ ಕೊರೊನಾ ವ್ಯಾಕ್ಸಿನ್‌ ಡೋಸ್‌ ಅನ್ನು ಪಡೆದಿದ್ದಾರೆ. ಕೇರಳದಲ್ಲಿ ಕೇವಲ ಶೇ.11.03ರಷ್ಟು ಜನರು ಬೂಸ್ಟರ್ ಡೋಸ್‌ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಶೇ.10.63ರಷ್ಟು ಮಂದಿ ಮೂರನೇ ಲಸಿಕೆ ಪಡೆದಿದ್ದಾರೆ.

ಉಳಿದಂತೆ ದೆಹಲಿಯಲ್ಲಿ ಶೇ.19.22, ಪಶ್ಚಿಮ ಬಂಗಾಳದಲ್ಲಿ ಶೇ. 22.78,  ಉತ್ತರ ಪ್ರದೇಶದಲ್ಲಿ ಶೇ. 25.57, ಲಡಾಖ್ನಲ್ಲಿ ಶೇ.52.3, ಆಂಧ್ರಪ್ರದೇಶದಲ್ಲಿ ಶೇ. 41.13, ಪುದುಚೇರಿಯಲ್ಲಿ ಶೇ.39.73 ಮತ್ತು ಸಿಕ್ಕಿಂನಲ್ಲಿ ಶೇ. 37.48ರಷ್ಟು ಜನರು ಕೋವಿಡ್‌ ಮೂರನೇ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...