ನವದೆಹಲಿ: ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಸೋಂಕಿತರ ಜೀವ ರಕ್ಷಣೆಗಾಗಿ ಹಗಲಿರುಳು ಹೋರಾಟ ನಡೆಸುತ್ತಿರುವ ವೈದ್ಯರುಗಳೇ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಕೋವಿಡ್ ಎರಡನೇ ಅಲೆ ಅಟ್ಟಹಾಸಕ್ಕೆ ಬರೋಬ್ಬರಿ 719 ವೈದ್ಯರು ಸಾವನ್ನಪ್ಪಿದ್ದಾರೆ.
ಕೇಂದ್ರ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ; 5-6 ಸಚಿವರಿಗೆ ಕೋಕ್ ನೀಡುವ ಸಾಧ್ಯತೆ
ಇಂಡಿಯನ್ ಮೆಡಿಕಲ್ ಅಸೋಸಿಯೆಷನ್ ಈ ಕುರಿತು ಮಾಹಿತಿ ನೀಡಿದ್ದು, ಕೊರೊನಾ ಎರಡನೇ ಅಲೆಯಲ್ಲಿ ದೇಶದ ಯಾವ ಯಾವ ರಾಜ್ಯಗಳಲ್ಲಿ ವೈದ್ಯರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದೆ. ಬಿಹಾರ ರಾಜ್ಯ ಒಂದರಲ್ಲಿಯೇ ಅತಿ ಹೆಚ್ಚು ವೈದ್ಯರು ಬಲಿಯಾಗಿದ್ದು, 111 ಡಾಕ್ಟರ್ಸ್ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.
ಗಮನಿಸಿ…! ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 109 ವೈದ್ಯರು, ಉತ್ತರಪ್ರದೇಶ 79, ಪಶ್ಚಿಮ ಬಂಗಾಳ 63, ಆಂಧ್ರಪ್ರದೇಶ 35, ತೆಲಂಗಾಣ 36, ತಮಿಳುನಾಡು 32 ಹಾಗೂ ಕರ್ನಾಟಕದಲ್ಲಿ 9 ವೈದ್ಯರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ.