ನವದೆಹಲಿ: ದೇಶಾದ್ಯಂತ ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗುತ್ತಿದ್ದು, ರಿಕವರಿ ರೇಟ್ ಶೇ.96.56ರಷ್ಟು ಹೆಚ್ಚಿದೆ. ಆದರೆ ಮೊನ್ನೆಗಿಂತ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 50,848 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,00,28,709ಕ್ಕೆ ಏರಿಕೆಯಾಗಿದೆ.
BPL ಜೊತೆಗೆ APL ಕಾರ್ಡ್ ದಾರರಿಗೆ 5 ಲಕ್ಷ ರೂ. ಪರಿಹಾರ ನೀಡಲು ಆಗ್ರಹ
ಕಳೆದ 24 ಗಂಟೆಯಲ್ಲಿ 1,358 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 3,90,660 ಕ್ಕೆ ಏರಿಕೆಯಾಗಿದೆ.
ಲಸಿಕೆ ನೀಡಿಕೆಯೊಂದಿಗೆ ಕಾಲೇಜು ಆರಂಭಕ್ಕೆ ಚಿಂತನೆ, ಹಂತ ಹಂತವಾಗಿ ಶಾಲೆ ಪುನಾರಂಭ ಸಾಧ್ಯತೆ
ಇನ್ನು ದೇಶದಲ್ಲಿ 7,29,243ಕೋವಿಡ್ ಸಕ್ರಿಯ ಪ್ರಕರಣ ಕೂಡ ಗಣನೀಯವಾಗಿ ಕಡಿಮೆಯಾಗುತ್ತಿದ್ದು, 6,43,194 ಸಕ್ರಿಯ ಪ್ರಕರಣಗಳಿವೆ. ಇದು ಕಳೆದ 82 ದಿನಗಳಲ್ಲೇ ಅತಿ ಕಡಿ ಆಕ್ಟೀವ್ ಕೇಸ್ ಆಗಿದೆ. ಕಳೆದ 24 ಗಂಟೆಯಲ್ಲಿ 68,817 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.