ನೆಲ್ಲೂರು: ತೀವ್ರ ಚರ್ಚೆಗೆ ಕಾರಣವಾಗಿದ್ದ ಆನಂದಯ್ಯ ಆಯುರ್ವೇದ ಔಷಧಿಗೆ ಕೊನೆಗೂ ಆಂಧ್ರಪ್ರದೇಶ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ಆನಂದಯ್ಯ ಕೊರೊನಾ ಸೋಂಕಿಗೆ ಔಷಧಿ ನೀಡುತ್ತಿದ್ದರು. ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಔಷಧದ ಬಗ್ಗೆ ಪರಿಶೀಲನೆ ನಡೆಸಲು ಆಂಧ್ರ ಸರ್ಕಾರ ಸಿ ಸಿ ಆರ್ ಎ ಎಸ್ ಸಮಿತಿ ರಚಿಸಿತ್ತು.
ಇದೀಗ ಸಮಿತಿ ವರದಿ ನೀಡಿದ್ದು, ಆನಂದಯ್ಯ ನೀಡುತ್ತಿರುವ ಔಷಧದಿಂದ ಯಾವುದೇ ಅಪಾಯವಿಲ್ಲ. ಆದರೆ ಕಣ್ಣಿಗೆ ಹಾಕುವ ಔಷಧ ಸಧ್ಯಕ್ಕೆ ನೀಡುವಂತಿಲ್ಲ. ಕಣ್ಣಿಗೆ ಹಾಕುವ ಔಷಧದ ಬಗ್ಗೆ ಇನ್ನೊಂದು ವರದಿ ಬರುವ ಅಗತ್ಯವಿದೆ ಎಂದಿದೆ.
ಆದರೆ ಈ ಔಷಧದಿಂದ ಕೊರೊನಾ ಸೋಂಕು ಗುಣವಾಗಲಿದೆ ಎಂಬುದನ್ನು ಸಮಿತಿ ಒಪ್ಪಿಲ್ಲ. ಆದರೆ ಆನಂದಯ್ಯ ಔಷಧದಿಂದ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಸಮಿತಿ ವರದಿ ಬೆನ್ನಲ್ಲೇ ಆಂಧ್ರ ಸರ್ಕಾರ ಆನಂದಯ್ಯ ಔಷಧಿ ವಿತರಣೆಗೆ ಅವಕಾಶ ನೀಡಿದೆ.
ಆನಂದಯ್ಯ ಔಷಧಿ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಾತ್ಕಾಲಿಕ ತಡೆ ನೀಡಿತ್ತು.