ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆಯ ಸುಮಾರು 50 ಮಿಲಿಯನ್ ಡೋಸ್‌ಗಳ ಎಕ್ಸ್‌ಪೈರಿ ಡೇಟ್ ಹತ್ತಿರ ಬರ್ತಾ ಇದೆ. 2023 ರ ಆರಂಭದಲ್ಲಿ ಈ ಲಸಿಕೆಗಳ ಎಕ್ಸ್‌ಪೈರಿ ಡೇಟ್ ಮುಕ್ತಾಯವಾಗಲಿದೆ. ಲಸಿಕೆಗೆ ಹೆಚ್ಚಿನ ಬೇಡಿಕೆ ಇಲ್ಲದ ಕಾರಣ ವ್ಯಾಕ್ಸಿನ್ ಬಳಕೆಯಾಗದೇ ವೇಸ್ಟ್ ಆಗುತ್ತಿದೆ.
ವ್ಯಾಕ್ಸಿನ್‌ಗೆ ಡಿಮ್ಯಾಂಡ್ ಇಲ್ಲದೇ ಇರುವುದನ್ನು ಮನಗಂಡ ಭಾರತ್ ಬಯೋಟೆಕ್, ಕೋವಾಕ್ಸಿನ್ ಲಸಿಕೆಯ ಉತ್ಪಾದನೆಯನ್ನು ಈ ವರ್ಷಾರಂಭದಲ್ಲೇ ನಿಲ್ಲಿಸಿತ್ತು. ಆದರೂ ಲಸಿಕೆ ತಯಾರಕರು 2021ರ ಕೊನೆಯಲ್ಲಿ 1 ಬಿಲಿಯನ್ ಡೋಸ್‌ಗಳ ವಾರ್ಷಿಕ ಸಾಮರ್ಥ್ಯವನ್ನು ತಲುಪಲು ವ್ಯಾಕ್ಸಿನ್ ತಯಾರಿಸಿದ್ದಾರೆ.
ಭಾರತ್ ಬಯೋಟೆಕ್ ಸದ್ಯ 200 ಮಿಲಿಯನ್ ಡೋಸ್ ಕೋವಾಕ್ಸಿನ್ ಅನ್ನು ಹೊಂದಿದೆ. ಸರಿಸುಮಾರು 50 ಮಿಲಿಯನ್ ಡೋಸ್ ಬಾಟಲಿಗಳಲ್ಲಿ ಬಳಸಲು ಸಿದ್ಧವಾಗಿದೆ. ಆದರೆ ವ್ಯಾಕ್ಸಿನ್ ಪಡೆಯಲು ಜನರೇ ಮುಂದಾಗುತ್ತಿಲ್ಲ. 2023ರ ಆರಂಭದಲ್ಲಿ ಬಾಟಲಿಗಳಲ್ಲಿರುವ ಕೋವಾಕ್ಸಿನ್ ಡೋಸ್‌ಗಳ ಅವಧಿ ಮುಗಿಯಲಿದೆ. ಇದರಿಂದಾಗಿ ಕಂಪನಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಲಿದೆ.
ಮುಂದಿನ ವರ್ಷ ಎಲ್ಲಾ 50 ಮಿಲಿಯನ್ ಡೋಸ್‌ಗಳ ಎಕ್ಸ್‌ಪೈರಿ ಆಗಿಬಿಟ್ಟರೆ ಕಂಪನಿಗೆ ನಿಖರವಾಗಿ ಎಷ್ಟು ನಷ್ಟವಾಗಲಿದೆ ಅನ್ನೋದು ಬಹಿರಂಗವಾಗಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಶನಿವಾರ 1,082 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 15,200 ಕ್ಕೆ ಇಳಿದಿದೆ.
ಇಲ್ಲಿಯವರೆಗೆ ಕೋವಾಕ್ಸಿನ್ ಸೇರಿದಂತೆ 219.71 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ರಾಷ್ಟ್ರವ್ಯಾಪಿ ಹಾಕಲಾಗಿದೆ. ಜಾಗತಿಕವಾಗಿ ಸೋಂಕಿನ ಪ್ರಮಾಣವು ಇಳಿಮುಖವಾಗುತ್ತಿರುವುದರಿಂದ, ವಿದೇಶಗಳಿಂದಲೂ ಕೋವ್ಯಾಕ್ಸಿನ್‌ಗೆ ಹೆಚ್ಚಿನ ಬೇಡಿಕೆಯಿಲ್ಲ. ಹಾಗಾಗಿ ರಫ್ತು ಪ್ರಮಾಣ ಕೂಡ ಕಡಿಮೆಯಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ವಿಶ್ವಸಂಸ್ಥೆಯ ಸಂಗ್ರಹಣಾ ಏಜೆನ್ಸಿಗಳ ಮೂಲಕ ಕೋವ್ಯಾಕ್ಸಿನ್ ಪೂರೈಕೆಯನ್ನು ಅಮಾನತುಗೊಳಿಸಿತ್ತು. ಈ ಲಸಿಕೆಯನ್ನು ಬಳಸುವ ದೇಶಗಳು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡಿತ್ತು.