ಕೊರೊನಾ ವೈರಸ್ನ ಹೊಸ ರೂಪಾಂತರಿಯಾದ ಓಮಿಕ್ರಾನ್ ವಿಶ್ವಾದ್ಯಂತ ಸೋಂಕಿನ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಓಮಿಕ್ರಾನ್ ಆರ್ಭಟದಿಂದ ಇಡೀ ಜಗತ್ತೇ ಕಂಗಾಲಾಗಿರುವ ಬೆನ್ನಲ್ಲೇ ಇದೀಗ ಫ್ರಾನ್ಸ್ನ ವಿಜ್ಞಾನಿಗಳು ಓಮಿಕ್ರಾನ್ನ ಹೊಸ ರೂಪಾಂತರಿತ ತಳಿಯನ್ನು ಪತ್ತೆ ಮಾಡಿದ್ದಾರೆ..!
IHU ಎಂದು ಹೆಸರಿಸಲಾದ, B.1.640.2 ರೂಪಾಂತರಿಯನ್ನು IHU ಮೆಡಿಟರೇನಿ ಇನ್‌ಫೆಕ್ಷನ್‌ನಲ್ಲಿನ ಶಿಕ್ಷಣ ತಜ್ಞರು ಕಂಡುಹಿಡಿದಿದ್ದಾರೆ.
ಇದು ಓಮಿಕ್ರಾನ್ಗಿಂತಲೂ ಹೆಚ್ಚು ಅಂದರೆ 46ಕ್ಕೂ ಅಧಿಕ ರೂಪಾಂತರಗಳನ್ನು ಹೊಂದಿದೆ. ಇವು ಲಸಿಕೆಗಳ ವಿರುದ್ಧವೂ ಗೆಲ್ಲಬಲ್ಲವು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ರೂಪಾಂತರದ ಕನಿಷ್ಠ 12 ಪ್ರಕರಣಗಳು ಮಾರ್ಸಿಲ್ಲೆಸ್ ಬಳಿ ವರದಿಯಾಗಿದೆ. ಇದನ್ನು ಆಫ್ರಿಕನ್ ದೇಶ ಕ್ಯಾಮರೂನ್‌ಗೆ ಪ್ರಯಾಣಿಸಿದ್ದಕ್ಕೆ ಲಿಂಕ್ ಮಾಡಲಾಗಿದೆ. ವಿಶ್ವದ ಬಹುತೇಕ ಭಾಗಗಳಲ್ಲಿ ಪ್ರಸ್ತುತ ಓಮಿಕ್ರಾನ್ ರೂಪಾಂತರಿಯು ಪ್ರಬಲ ತಳಿಯಾಗಿದೆ. ಆದರೆ ಈ ನಡುವೆಯೂ ಐಹೆಚ್ಯು ಇನ್ನಷ್ಟು ಭೀಕರತೆಯನ್ನು ಹೆಚ್ಚಿಸಿದೆ.
B.1.640.2 ಅನ್ನು ಇತರೆ ಯಾವುದೇ ದೇಶಗಳಲ್ಲಿ ಗುರುತಿಸಲಾಗಿಲ್ಲ ಅಥವಾ ವಿಶ್ವ ಆರೋಗ್ಯ ಸಂಸ್ಥೆಯು ಈ ರೂಪಾಂತರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದೆ.