ಮಂಡ್ಯ: ಹಲವು ದಿನಗಳಿಂದ ಚಿರತೆ ದಾಳಿಯಿಂದ ಕಂಗಾಲಾಗಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಬ್ಬನಕುಪ್ಪೆ ಗ್ರಾಮದ ಜನರು ಈಗ ನಿಟ್ಟುಸಿರುಬಿಡುವಂತಾಗಿದೆ. ಈ ಭಾಗದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಸೆರೆಸಿಕ್ಕಿದೆ.
ಹಲವು ದಿನಗಳಿಂದ ಸಬ್ಬನಕುಪ್ಪೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿತ್ತು. ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದರು. ಅದರಂತೆ ಬಾಲು ಎಂಬುವವರ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನು ಇರಿಸಿದ್ದರು. ಬೋನಿಗೆ ಈಗ ಚಿರತೆ ಬಿದ್ದಿದೆ.
ಇಂದು ಬೆಳಿಗ್ಗೆ ಆಹಾರ ಅರಸಿ ತೋಟದತ್ತ ಬಂದಿದ್ದ ಚಿರತೆ ಬೋನಿನಲ್ಲಿದ್ದ ಆಹಾರ ತಿನ್ನಲು ಹೋಗಿ ಬೋನಿನಲ್ಲಿ ಸೆರೆಯಾಗಿದೆ. ಬೋನಿಗೆ ಬಿದ್ದ ಚಿರತೆ ನೋಡಲು ಸಾವಿರಾರು ಗ್ರಾಮಸ್ಥರು ನೆರೆದಿದ್ದಾರೆ.