ಬೆಂಗಳೂರು: ತಾನು ಮೂರು ಬಿಟ್ಟವನು ಎಂದು ನಟ ದರ್ಶನ್ ಹೇಳಿದ್ದಾರೆ, ಮೂರು ಬಿಟ್ಟವರ ಬಳಿ ನಾನೇನು ಮಾತನಾಡಲಿ ಎಂದು ಹೇಳುವ ಮೂಲಕ ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೆ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್, ನಾನು ಲೀಗಲ್ ಆಗಿ ಎಲ್ಲವನ್ನು ಎದುರಿಸುತ್ತೇನೆ. ವಕೀಲರ ಮೂಲಕವೇ ಹೋಗುತ್ತೇನೆ. ಪ್ರಕರಣದ ಬಗ್ಗೆ ಸುಮೋಟೊ ಕೇಸ್ ಆಗಿದೆ, ಎಫ್ಐಆರ್ ಕೂಡ ದಾಖಲಾಗಿದೆ. ನನ್ನ ಬಳಿ ಇರುವ ಆಡಿಯೋ ಹಾಗೂ ಸಾಕ್ಷ್ಯಗಳನ್ನು ಎಲ್ಲಿ ತಲುಪಿಸಬೇಕು ಅಲ್ಲಿ ತಲುಪಿಸುತ್ತೆನೆ ಎಂದು ಹೇಳಿದ್ದಾರೆ.
BIG NEWS; ನಾಳೆಯಿಂದ ಅನ್ ಲಾಕ್-4.0 ಜಾರಿ; ಇಲ್ಲಿದೆ ಹೊಸ ಮಾರ್ಗಸೂಚಿ
ನಟ ದರ್ಶನ್ ಅವರೇ ನಾನು ಮೂರು ಬಿಟ್ಟವನು ಎಂದು ಹೇಳಿಕೊಂಡಿದ್ದಾರೆ. ಕೊಚ್ಚೆಗೆ ಕಲ್ಲು ಎಸೆಯುವ ಕೆಲಸಕ್ಕೆ ನಾನು ಹೋಗಲ್ಲ ನಾನು ಲೀಗಲ್ ಆಗಿ ಹೋಗುತ್ತೇನೆ ಅಷ್ಟೇ. ಇನ್ನು ದರ್ಶನ್ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ, ಹಾಗಾಗಿ ಅವರು ಟ್ರೀಟ್ ಮೆಂಟ್ ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.